Advertisement

ಭಾರತ ಔಷಧ ರಫ್ತು ಮಾಡಿದ್ರೆ, ಪಾಕ್‌ನಿಂದ ಉಗ್ರವಾದ ರಫ್ತು!

07:45 PM Apr 18, 2020 | Hari Prasad |

ನವದೆಹಲಿ: ಜಗತ್ತಿನ ದೇಶಗಳಿಗೆ ಭಾರತ, ಕೋವಿಡ್ ವೈರಸ್ ಗೆ ಔಷಧಗಳನ್ನು ರಫ್ತು ಮಾಡುತ್ತಿದ್ದರೆ, ಇತ್ತ ಪಾಕಿಸ್ತಾನವು ಭಾರತದ ಗಡಿಯಲ್ಲಿ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ! ಹೀಗೆ ಖಡಕ್ಕಾಗಿ ಆರೋಪಿಸಿದ್ದು, ಭಾರತದ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ.

Advertisement

ಭಾರತ ತನ್ನ ದೇಶದ ಜನರಿಗೆ ಅಲ್ಲದೆ, ವಿಶ್ವದ ಇತರೆ ದೇಶಗಳಿಗೂ ಔಷಧ ನೆರವು ನೀಡುತ್ತಿದೆ. ಕೋವಿಡ್ ವೈರಸ್‌ ಪಾಕಿಸ್ತಾನವನ್ನೂ ಹಣ್ಣುಗಾಯಿ ನೀರುಗಾಯಿ ಮಾಡಿದೆ.

ಪಾಕ್‌ ತನ್ನೊಳಗೆ ಇಂಥ ದುಃಸ್ಥಿತಿ ಇಟ್ಟುಕೊಂಡಾಗ್ಯೂ, ಗಡಿಯಲ್ಲಿ ಭಯೋತ್ಪಾದಕರ ಒಳ ನುಸುಳುವಿಕೆಗೆ ಕುಮ್ಮಕ್ಕು ನೀಡುತ್ತಿದೆ. ಕಳೆದ ಕೆಲವು ವಾರಗಳಿಂದ ಪಾಕ್‌ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಫಿರಂಗಿ ದಾಳಿ, ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ಕೂಡ ಇದಕ್ಕೆ ತಕ್ಕ ಉತ್ತರ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next