Advertisement

ಪಾಕ್‌ ಸೇನಾದಂಡನಾಯಕನಿಗೆ ಸುಪ್ರೀಂ ಕೊಕ್‌

09:41 AM Nov 28, 2019 | Team Udayavani |

ಇಸ್ಲಾಮಾಬಾದ್‌: ಮಹತ್ವದ ವಿದ್ಯಮಾನವೊಂದರಲ್ಲಿ ಪಾಕಿಸ್ಥಾನ ಸುಪ್ರೀಂ ಕೋರ್ಟ್‌, ಸೇನಾ ದಂಡನಾಯಕ ಜ| ಖಮರ್‌ ಜಾವೇದ್‌ ಬಜ್ವಾರ ಸೇವಾವಧಿ ವಿಸ್ತರಣೆಯನ್ನು ರದ್ದುಗೊಳಿಸಿದೆ. ಇದರಿಂದ ಬಾಜ್ವಾ ಈಗ ಹುದ್ದೆ ತ್ಯಜಿಸಲಿದ್ದಾರೆಯೇ? ಅಥವಾ ಸುಪ್ರೀಂ ಆದೇಶವನ್ನೇ ಧಿಕ್ಕರಿಸಿ ಒಂದು ರೀತಿಯ ಸೇನಾಡಳಿತವನ್ನು ಹೇರಲಿದ್ದಾರೆಯೇ ಎಂಬುದು ಕುತೂಹಲದ ಸಂಗತಿಯಾಗಿದೆ.

Advertisement

ಕಳೆದ ನ.29ರಂದು ಬಾಜ್ವಾ ನಿವೃತ್ತಿ ಹೊಂದಿದ್ದು, ಅದಕ್ಕೂ ಮುನ್ನ ಅವರ ಸೇವಾವಧಿಯನ್ನು ಮೂರು ವರ್ಷಕ್ಕೆ ವಿಸ್ತರಣೆಗೊಳಿಸಿ .19ರಂದು ಇಮ್ರಾನ್‌ ಖಾನ್‌ ನೇತೃತ್ವದ ಸರಕಾರ ಅಆದೇಶ ಹೊರಡಿಸಿತ್ತು. ಇದನ್ನು ಮುಖ್ಯ ನ್ಯಾ. ಆಸಿಫ್ ಸಯೀದ್‌ ಖೋಸಾ ಅವರಿದ್ದ ನ್ಯಾಯಪೀಠ ರದ್ದುಗೊಳಿಸಿದೆ.

ಬಾಜ್ವಾ ಸೇವಾವಧಿ ವಿಸ್ತರಣೆಗೊಳಿಸಿದ್ದು ಇಮ್ರಾನ್‌ ಖಾನ್‌ ಸರಕಾರದವಾದರೂ ಬಾಜ್ವಾ ತಮ್ಮ ಅತಿ ಪ್ರಬಲ ಸೇನಾ ದಂಡನಾಯಕನ ಶಕ್ತಿ ಬಳಸಿಯೇ ಸೇವಾವಧಿ ವಿಸ್ತಣೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಬಾಜ್ವಾ ಕುರಿತ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಮೂರ್ತಿಯವರು ಖಾನ್‌ ಸಂಪುಟದ 25ರಲ್ಲಿ 11 ಮಂದಿ ಮಾತ್ರ ಬಾಜ್ವಾ ಸೇವಾವಧಿ ವಿಸ್ತರಣೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ವಿಚಾರಣೆ ವೇಳೆ ಈ ಕುರಿತಾಗಿ ಅಧ್ಯಕ್ಷರ ಸಮ್ಮತಿ ಮೇರೆಗೆ ಬಾಜ್ವಾ ಸೇವಾವಧಿ ವಿಸ್ತರಣೆಯಾಗಿದೆ ಎಂದು ಸರಕಾರದ ಪರ ವಕೀಲರು ವಾದಿಸಿದ್ದರು.

ರಿಯಾಜ್‌ ರಹಿ ಎಂಬವರು ಬಾಜ್ವಾ ಸೇವಾವಧಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದು, ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು. ಅದರಂತೆ ಕೋರ್ಟ್‌ ಈಗ ತೀರ್ಪು ನೀಡಿದೆ. ಸೇನಾ ದಂಡನಾಯಕನ ಸೇವಾವಧಿ ವಿಸ್ತರಣೆ ಕುರಿತ ಸರಕಾರದ ಆದೇಶವನ್ನು ಕೋರ್ಟ್‌ ರದ್ದುಪಡಿಸಿದ ಕ್ರಮ ಪಾಕ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಯಾಗಿದೆ. ಈ ಬಗ್ಗೆ ಸೇನೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next