Advertisement

ಪಾಕ್ ಸೇನಾ ಬಂಕರ್ ಧ್ವಂಸ ಮಾಡಿದ ಸೇನೆ: ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದ ಪಾಕ್

09:29 AM Nov 14, 2020 | keerthan |

ಹೊಸದಿಲ್ಲಿ: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯುದ್ದಕ್ಕೂ ಸತತವಾಗಿ ಅಪ್ರಚೋದಿತ ದಾಳಿ ನಡೆಸುತ್ತಾ ಬಂದ ಪಾಕಿಸ್ತಾನಕ್ಕೆ ಶುಕ್ರವಾರ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್‌ ಪಡೆಯ ಕದನ ವಿರಾಮ ಉಲ್ಲಂಘನೆಗೆ ದಿಟ್ಟ ಉತ್ತರ ನೀಡಿರುವ ಯೋಧರು, ಪ್ರತಿದಾಳಿ ನಡೆಸಿ ಪಾಕಿಸ್ತಾನದ 11 ಸೈನಿಕರನ್ನು ಹತ್ಯೆಗೈದಿದ್ದಾರೆ. ಅಷ್ಟೇ ಅಲ್ಲ, ಎಲ್‌ಒಸಿಯುದ್ದಕ್ಕೂ ಇರುವ ಪಾಕಿಸ್ತಾನಿ ಸೇನೆಯ ಶಿಬಿರಗಳು ಹಾಗೂಬಂಕರ್‌ಗಳನ್ನೂ ಧ್ವಂಸಗೊಳಿಸಲಾಗಿದೆ.

Advertisement

ಆದರೆ ಪಾಕಿಸ್ಥಾನ ಮತ್ತೆ ವರಸೆ ತೋರಿಸಿದ್ದು, ಕೇವಲ ಒಬ್ಬ ಯೋಧ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದಿದೆ. ಅಲ್ಲದೆ ನಾಲ್ವರು ನಾಗರಿಕರು ಸಾವನ್ನಪ್ಪಿ, 12 ಮಂದಿ ಗಾಯಗೊಂಡಿದ್ದಾರೆಂದು ಪಾಕ್ ಹೇಳಿದೆ. ಅಷ್ಟೇ ಅಲ್ಲದೆ ಘಟನೆಯ ಕುರಿತಂತೆ ಪಾಕಿಸ್ಥಾನದಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ.

ಜಮ್ಮು ಮತ್ತು ಕಾಶ್ಮೀರದ ಗುರೇಜ್‌ನಿಂದ ಉರಿ ವಲಯದವರೆಗೂ ಅಂದರೆ, ದಾವಾರ್‌, ಕೇರನ್‌, ಉರಿ, ನೌಗಾಮ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ಏಕಾಏಕಿ ಪಾಕ್‌ ಸೇನೆ ಗುಂಡಿನ ಮಳೆಗರೆಯತೊಡಗಿತು. ಭಾರತೀಯ ಸೇನೆಯ ಮುಂಚೂಣಿ ನೆಲೆಗಳು ಹಾಗೂ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಶೆಲ್‌ಗ‌ಳು ತೂರಿ ಬಂದವು. ಈ ಅನಿರೀಕ್ಷಿತ ದಾಳಿಯಿಂದಾಗಿ ಬಿಎಸ್‌ ಎಫ್ ಸಬ್‌ಇನ್‌ಸ್ಪೆಕ್ಟರ್‌ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾದರು. ಜತೆಗೆ, 6 ಮಂದಿ ನಾಗರಿಕರು ಕೂಡ ಅಸುನೀಗಿದರು. ನಾಲ್ವರು ಯೋಧರು ಮತ್ತು 8 ನಾಗರಿಕರು ಗಾಯಗೊಂಡರು.

ಇದನ್ನೂ ಓದಿ:ಎಚ್ಚರ ವಹಿಸಿ: ಹಸಿರು ಪಟಾಕಿಯಿಂದಲೂ ಹಾನಿ ತಪ್ಪಿದ್ದಲ್ಲ!

ಪಾಕ್‌ ಪಡೆಯ ಈ ಕುಕೃತ್ಯದಿಂದ ಆಕ್ರೋಶಗೊಂಡ ಭಾರತೀಯ ಸೇನೆ, ಪ್ರಬಲ ಪ್ರತ್ಯುತ್ತರ ನೀಡಲಾರಂಭಿಸಿತು. ಪ್ರತಿದಾಳಿ ನಡೆಸಿ ಪಾಕಿಸ್ತಾನದ 11 ಸೈನಿಕರನ್ನು ಹತ್ಯೆಗೈದಿದ್ದಾರೆ.  ಎಲ್‌ಒಸಿಯುದ್ದಕ್ಕೂ ಇರುವ ಪಾಕಿಸ್ತಾನಿ ಸೇನೆಯ ಶಿಬಿರಗಳು ಹಾಗೂ ಬಂಕರ್‌ಗಳನ್ನೂ ಧ್ವಂಸಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next