Advertisement

ವಿಷ ಕಾರುತ್ತಿರುವ ಪಾಕ್‌: ವಿಶ್ವಸಂಸ್ಥೆಯಲ್ಲಿ ಭಾರತ ಆಕ್ರೋಶ

10:11 AM Jan 25, 2020 | Hari Prasad |

ವಿಶ್ವಸಂಸ್ಥೆ/ದಾವೋಸ್‌: ಪಾಕಿಸ್ಥಾನವು ಭಾರತದ ವಿರುದ್ಧ ವಿಶ್ವಸಂಸ್ಥೆಯ ಹಲವು ವೇದಿಕೆಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ವಿಷ ಕಾರುತ್ತಿದೆ. ಜತೆಗೆ ಹಲವು ಸುಳ್ಳು ಮಾಹಿತಿಗಳನ್ನು ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ರಾಯಭಾರ ಕಚೇರಿಯ ಉಪ ಅಧಿಕಾರಿ ಕೆ.ನಾಗರಾಜ ನಾಯ್ಡು ಆರೋಪಿಸಿದ್ದಾರೆ.

Advertisement

‘ಪಾಕಿಸ್ಥಾನ ಯಾವತ್ತಿದ್ದರೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಗೊಂದಲ ಮತ್ತು ಅಸ್ಪಷ್ಟತೆಯಿಂದ ಕೂಡಿದ ಅಂಶಗಳನ್ನೇ ನೀಡುತ್ತದೆ. ಮೀನಿಗೆ ನೀರಲ್ಲಿ ಈಜಲು ಕಲಿಸಿದಂತೆ ನಮ್ಮ ನೆರೆಯ ರಾಷ್ಟ್ರದ ಒಂದಲ್ಲ ಒಂದು ನಿಯೋಗ ತ್ವೇಷಮಯ ಮಾತುಗಳನ್ನೇ ಭಾರತದ ವಿರುದ್ಧ ಆಡುತ್ತಿವೆ. ತನ್ನ ದೇಶದಲ್ಲಿಯೇ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫ‌ಲ ಹೊಂದಿದ ರಾಷ್ಟ್ರವೊಂದು ಮತ್ತೂಂದರ ವಿರುದ್ಧ ಬೊಟ್ಟು ಮಾಡಿ ತೋರಿಸುತ್ತಿರುವುದು ಆಶ್ಚರ್ಯ ತಂದಿದೆ’ ಎಂದಿದ್ದಾರೆ.

‘ಮುಸ್ಲಿಮರಿಗೆ ಕಿರುಕುಳ ನೀಡಿದ್ರೂ ನಾವು ಚೀನವನ್ನು ಟೀಕಿಸಲ್ಲ’: ಚೀನದಲ್ಲಿ ಉಯಿ ಗೂರು ಮುಸ್ಲಿಮರಿಗೆ ಚಿತ್ರಹಿಂಸೆ ನೀಡಲಾಗುತ್ತಿ ದ್ದರೂ, ಚೀನವನ್ನು ಸಾರ್ವಜನಿಕವಾಗಿ ಟೀಕಿಸದೇ ಇರಲು ನಾವು ನಿರ್ಧರಿಸಿದ್ದೇವೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಕಾಶ್ಮೀರದ ವಿಚಾರ ವನ್ನು ಪದೇ ಪದೆ ಪ್ರಸ್ತಾಪಿಸುವ ನೀವು ಚೀನ ನೀಡುವ ಕಿರುಕುಳ ಬಗ್ಗೆ ಪ್ರಸ್ತಾಪಿಸುವುದಿಲ್ಲವೇಕೆ ಎಂಬ ಪ್ರಶ್ನೆಗೆ ಖಾನ್‌, “ಚೀನ ನಮಗೆ ಪ್ರತಿ ವಿಷಯದಲ್ಲೂ ಬೆಂಬಲ ನೀಡುತ್ತಾ ಬಂದಿದೆ.

ಹಾಗಾಗಿ ಅವರು ಮುಸ್ಲಿಮರಿಗೆ ಕಿರುಕುಳ ನೀಡಿದರೂ, ನಾವು ಸಾರ್ವಜನಿಕವಾಗಿ ಟೀಕಿಸಲ್ಲ’ ಎಂದಿದ್ದಾರೆ. ಇದೇ ವೇಳೆ, ಪಾಕ್‌ನಲ್ಲಿ ಹೂಡಿಕೆಗೆ ವಿದೇಶಿ ಕಂಪೆನಿಗಳಿಗೆ ಆಹ್ವಾನ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿರುವ ಇಮ್ರಾನ್‌ ಖಾನ್‌, ದಾವೋಸ್‌ನ ವಿಶ್ವ ಆರ್ಥಿಕ ಶೃಂಗದಲ್ಲಿ ಮಾತನಾಡಿ ‘ಭಾರತ ನಮ್ಮ ದೇಶಕ್ಕಿಂತ 7 ಪಟ್ಟು ದೊಡ್ಡದಾಗಿತ್ತು.

ಇದರ ಹೊರತಾಗಿಯೂ ನಾನು ಕ್ರಿಕೆಟ್‌ ಆಡುತ್ತಿದ್ದಾಗ ಅವರನ್ನು ಸೋಲಿಸಿದ್ದೆವು. ಹಾಕಿ ಮತ್ತು ಇತರ ಕ್ರೀಡೆಗಳಲ್ಲಿಯೂ ನಾವೇ ಮುಂದೆ ಇದ್ದೆವು’ ಎಂದಿದ್ದಾರೆ. ಪ್ರಾಕೃತಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳಲ್ಲಿ ನಮ್ಮ ದೇಶ ಶ್ರೀಮಂತವಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next