Advertisement

ನಡೆಯದ ಜಾಧವ್‌ ಭೇಟಿ

01:10 AM Aug 04, 2019 | mahesh |

ಇಸ್ಲಾಮಾಬಾದ್‌: ಪಾಕಿಸ್ತಾನ ಜೈಲಿನಲ್ಲಿ ಬಂಧಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಕಮಾಂಡರ್‌ ಕುಲಭೂಷಣ್‌ ಜಾಧವ್‌ ಹಾಗೂ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳ ನಡುವೆ ನಿಗದಿಯಾಗಿದ್ದ ರಾಜತಾಂತ್ರಿಕ ಭೇಟಿಯು ನಡೆದಿಲ್ಲ. ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದಂತೆ, ಜಾಧವ್‌ಗೆ ರಾಜತಾಂತ್ರಿಕ ಅನುಕೂಲ ಕಲ್ಪಿಸಲು ಪಾಕಿಸ್ತಾನ ಸಿದ್ಧವಾಗಿದ್ದರೂ, ಪಾಕಿಸ್ತಾನದ ಅಧಿಕಾರಿ ಅಥವಾ ಸಿಸಿಟಿವಿಯ ಅವಗಾಹನೆಯ ಇರಬೇಕೆಂದು ತಾಕೀತು ಮಾಡಿದೆ. ಆ ಪ್ರಸ್ತಾವನೆಯನ್ನು ಭಾರತ ತಿರಸ್ಕರಿಸಿದೆ. ಹೀಗಾಗಿ, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ ಭೇಟಿ ನಡೆಯಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next