Advertisement

ಮುಜುಗರಕ್ಕೀಡಾದ ಪಾಕಿಸ್ತಾನ! ಟರ್ಕಿ ಕೊಟ್ಟಿದ್ದನ್ನೇ ಟರ್ಕಿಗೆ ಮರಳಿಸಿದ ಪಾಕ್‌

08:53 PM Feb 18, 2023 | Team Udayavani |

ಇಸ್ಲಾಮಾಬಾದ್‌:“ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬ ಮಾತನ್ನು ಪಾಕಿಸ್ತಾನ ಸರ್ಕಾರವು ಅಕ್ಷರಶಃ ಪಾಲಿಸಿದೆ!

Advertisement

ಹೌದು, 2022ರಲ್ಲಿ ತೀವ್ರ ಪ್ರವಾಹ ಎದುರಾದಾಗ ತನಗೆ ಟರ್ಕಿ ದೇಶವು ಕಳುಹಿಸಿಕೊಟ್ಟಿದ್ದ ಪರಿಹಾರ ಸಾಮಗ್ರಿಗಳನ್ನೇ ಪಾಕಿಸ್ತಾನವು ಈಗ ರೀಪ್ಯಾಕ್‌ ಮಾಡಿ ಅದೇ ದೇಶಕ್ಕೆ ಭೂಕಂಪ ಪರಿಹಾರವಾಗಿ ಕಳುಹಿಸಿಕೊಟ್ಟಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಅನುಭವಿಸಿದೆ.

ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ಅವರು ಭೂಕಂಪ ಪೀಡಿತ ಟರ್ಕಿಗೆ ಪ್ರವಾಸ ಕೈಗೊಂಡಿರುವಾಗಲೇ ಈ ಎಡವಟ್ಟು ನಡೆದಿದೆ.

ತಮಾಷೆಯೆಂದರೆ, ಟರ್ಕಿ ಸರ್ಕಾರವೇ ಕಳುಹಿಸಿಕೊಟ್ಟ ಪರಿಹಾರ ಸಾಮಗ್ರಿಗಳನ್ನು ನಮ್ಮ ಸರ್ಕಾರ ಟರ್ಕಿಗೇ ಕಳುಹಿಸಿದೆ ಎಂದು ಪಾಕ್‌ ಪತ್ರಕರ್ತ ಶಾಹಿದ್‌ ಮಸೂದ್‌ ಬಹಿರಂಗಪಡಿಸಿದ್ದಾರೆ.

ಹಣದುಬ್ಬರ ಶೇ.38.42ಕ್ಕೆ ಏರಿಕೆ:
ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಪಾಕಿಸ್ತಾನದ ಹಣದುಬ್ಬರ ಶೇ.38.42ಕ್ಕೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಆರ್ಥಿಕ ನೆರವು ಪಡೆಯುವ ಬಗ್ಗೆ ಮಾತುಕತೆಗಳು ಪ್ರಗತಿಯಲ್ಲಿ ಇರುವಂತೆಯೇ ಈ ಬೆಳವಣಿಗೆಯಾಗಿದೆ. ತೈಲೋತ್ಪನ್ನಗಳು, ಅನಿಲದ ಬೆಲೆಯನ್ನು ಐಎಂಎಫ್ ನಿರ್ದೇಶನದ ಅನ್ವಯ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು.

Advertisement

ಪಾಕಿಸ್ತಾನದ ಸಾಂಖ್ಯಿಕ ಇಲಾಖೆ ಶನಿವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಒಂದು ವರ್ಷಕ್ಕೆ ಹೋಲಿಕೆ ಮಾಡಿದರೆ ಹಣದುಬ್ಬರ ಪ್ರಮಾಣ ಶೇ.38.42ಕ್ಕೆ ಏರಿಕೆಯಾಗಿದೆ. ಕಳೆದ ವಾರ 34 ವಸ್ತುಗಳ ದರದಲ್ಲಿ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next