Advertisement

ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಕೋವಿಡ್ ರೋಗಿಗಳನ್ನು ಅಟ್ಟುತ್ತಿರುವ ಪಾಕಿಸ್ತಾನ

09:31 AM Mar 29, 2020 | Hari Prasad |

ಮೀರ್‌ಪುರ್‌: ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಂಜಾಬ್‌ ಪ್ರಾಂತ್ಯದಲ್ಲಿನ ಕೋವಿಡ್ 19 ವೈರಸ್ ಸೋಂಕಿತರನ್ನು ಬಲವಂತವಾಗಿ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಕಳುಹಿಸಲಾಗುತ್ತಿದೆ. ಪ್ರಮುಖವಾಗಿ ಪಿಒಕೆ ಮತ್ತು ಗಿಲ್ಗಿಟ್‌ ಬಾಲ್ಟಿಸ್ತಾನಕ್ಕೆ ಪಾಕ್‌ ಸರ್ಕಾರ ರೋಗಿಗಳನ್ನು ಸ್ಥಳಾಂತರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಮೀರ್‌ಪುರ್‌ ಮತ್ತು ಇತರ ಪ್ರಮುಖ ನಗರಗಳಲ್ಲಿ ಕ್ವಾರೆಂಟೈನ್‌ ಕೇಂದ್ರಗಳನ್ನು ತೆರೆಯಲಾಗಿದೆ. ಪಂಜಾಬ್‌ ಪ್ರಾಂತ್ಯವನ್ನು ಸಂಪೂರ್ಣ ಕೋವಿಡ್ 19 ವೈರಸ್‌ ಮುಕ್ತವಾಗಿಸುವ ಉದ್ದೇಶದಿಂದ ಅಲ್ಲಿರುವ ದೊಡ್ಡ ಸಂಖ್ಯೆಯ ರೋಗಿಗಳನ್ನು ಮೀರ್ಪುರ ಮತ್ತಿತರ ನಗರಗಳಿಗೆ ಬಲವಂತವಾಗಿ ಕಳುಹಿಸಲಾಗುತ್ತಿದೆ ಎನ್ನಲಾಗಿದೆ.

ಈ ನಡುವೆ ಸೋಂಕು ದೃಢಪಟ್ಟಿರುವ ರೋಗಿಗಳನ್ನು ಸೇನಾ ನೆಲೆಗಳು ಹಾಗೂ ಯೋಧರ ಕುಟುಂಬಗಳು ವಾಸವಿರುವ ಪ್ರದೇಶದ ಸಮೀಪವೂ ಕಳಿಸುವಂತಿಲ್ಲ ಎಂದು ಸೇನಾ ಮುಖ್ಯಸ್ಥರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಒಳಗೇ ಕ್ವಾರೆಂಟೈನ್‌ ಕೇಂದ್ರಗಳನ್ನು ತೆರೆಯುವುದಕ್ಕೆ ಅಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪಾಕ್‌ ಸರ್ಕಾರ ಈ ಕೆಲಸ ಮಾಡುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next