ಹೊಸದಿಲ್ಲಿ: ಫೆಬ್ರವರಿ 14 ರಂದು 40 ಸಿಆರ್‌ಪಿಎಫ್ ಉಗ್ರರನ್ನು ಹತ್ಯೆಗೈಯಲಾದ ಪುಲ್ವಾಮಾ ಭೀಕರ ಉಗ್ರ ದಾಳಿ ಬಗ್ಗೆ ಪಾಕಿಸ್ಥಾನ ಮತ್ತೆ ಪುರಾವೆ ಕೇಳಿದೆ.
ಬುಧವಾರ ಪಾಕ್ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ದಾಳಿಯ ಕುರಿತಾಗಿ ನಮಗೆ ಹೆಚ್ಚಿನ ಮಾಹಿತಿ, ಸಾಕ್ಷ್ಯ ಭಾರತದಿಂದ ಬೇಕಾಗಿದೆ ಎಂದು ಹೇಳಿದೆ.
ಭಾರತ ಸರ್ಕಾರ ದಾಳಿ ಕುರಿತಾಗಿ ಪಾಕ್ ಮೂಲದ ಉಗ್ರ ಸಂಘಟನೆ ಜೈಶ್ ಎ ಮೊಹಮದ್ ಉಗ್ರ ಸಂಘಟನೆಯ ಪಾತ್ರದ ಕುರಿತಾಗಿನ ದಾಖಲೆಗಳನ್ನು ಸಲ್ಲಿಸಿದ ಬಳಿಕ ಈ ಹೇಳಿಕೆಯನ್ನು ಪಾಕ್ ಬಿಡುಗಡೆ ಮಾಡಿದೆ.
ಮಾಧ್ಯಮಗಳು, ಬ್ಲಾಗ್‌ಗಳು, ವೆಬ್‌ಸೈಟ್‌ಗಳು , ಫೇಸ್‌ಬುಕ್, ಟ್ವೀಟರ್ ಹೀಗೆ ಎಲ್ಲಾ ಕಡೆಗಳಲ್ಲಿ ಅನೇಕರು ಜೈಶ್ ಸಂಘಟನೆಯೊಂದಿಗೆ ಬಹಿರಂಗವಾಗಿ ಸಂಬಂಧವನ್ನು ಘೋಷಿಸಿಕೊಂಡಿರುವುದು ಜಗಜ್ಜಾಹೀರಾಗಿದೆ ಎಂದು ಭಾರತ ಹೇಳಿತ್ತು.
ಭೀಕರ ದಾಳಿಯ ಹೊಣೆಯನ್ನು ಜೈಶ್ -ಎ- ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು, ಘಟನೆಯ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.