Advertisement

ಗಡಿಯಲ್ಲಿ ಸೇನೆಯ ಜಮಾವಣೆ:ಪಾಕ್ ನಲ್ಲಿ ಸದ್ದಿಲ್ಲದೆ ಉಗ್ರ ಮಸೂದ್ ನ ಬಿಡುಗಡೆ

09:11 AM Sep 11, 2019 | Team Udayavani |

ಇಸ್ಲಾಮಾಬಾದ್: ಗಡಿಭಾಗದಲ್ಲಿ ಸೇನೆ ಹಾಗೂ ಉಗ್ರರನ್ನು ಪಾಕಿಸ್ತಾನ ಜಮಾವಣೆಗೊಳಿಸುತ್ತಿರುವ ನಡುವೆಯೇ ಇದೀಗ ಮೋಸ್ಟ್ ವಾಂಟೆಡ್ ಉಗ್ರ, ಜೈಶ್ ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಝರ್ ನನ್ನು ಪಾಕಿಸ್ತಾನ ಬಂಧಿಸಿದ ಒಂದು ತಿಂಗಳ ಬಳಿಕ ಸದ್ದಿಲ್ಲದೇ ಬಿಡುಗಡೆ ಮಾಡಿದೆ.

Advertisement

ಅಲ್ಲದೇ ಜಮ್ಮುವಿನ ಸಿಯಾಲ್ ಕೋಟ್ ಸೆಕ್ಟರ್ಸ್ ಮತ್ತು ರಾಜಸ್ಥಾನದ ಗಡಿಭಾಗಗಳಲ್ಲಿ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆಗೊಳಿಸುತ್ತಿರುವುದಾಗಿ ಗುಪ್ತಚರ ಇಲಾಖೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ ಎಂದು ವರದಿ ತಿಳಿಸಿದೆ.

ಗಡಿಭಾಗದಲ್ಲಿನ ಪಾಕ್ ಚಟುವಟಿಕೆ ಹಾಗೂ ಉಗ್ರ ಮಸೂದ್ ಬಿಡುಗಡೆ ಗಮನಿಸಿದರೆ ಭಾರತದ ಮೇಲೆ ಉಗ್ರರ ದಾಳಿ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಗಡಿಭಾಗಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಇತ್ತೀಚೆಗಷ್ಟೇ ಎಫ್ ಎಟಿಎಫ್ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ತಾನು ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದೇನೆ ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿಕೊಳ್ಳಲು ಉಗ್ರ ಮಸೂದ್ ಅಝರ್ ನನ್ನು ಬಂಧಿಸುವ ನಾಟಕವಾಡಿತ್ತು. ಇದೀಗ ಏಕಾಏಕಿ ಅಝರ್ ನನ್ನು ಬಿಡುಗಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next