Advertisement
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ 48.2 ಓವರ್‌ಗಳಲ್ಲಿ 220 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದರೆ, ಪಾಕ್ 47.4 ಓವರ್‌ಗಳಲ್ಲಿ 4 ವಿಕೆಟಿಗೆ 221 ರನ್ ಬಾರಿಸಿ ಗೆಲುವು ಸಾರಿತು.
ಮೊದಲ ಪಂದ್ಯದಲ್ಲಿ ಖಾತೆಯನ್ನೇ ತೆರೆಯದಿದ್ದ ನಾಯಕ ಸ್ಟೀವನ್ ಸ್ಮಿತ್ ಇಲ್ಲಿ ಸರ್ವಾಧಿಕ 60 ರನ್ ಬಾರಿಸಿ ತಂಡದ ರಕ್ಷಣೆಗೆ ನಿಂತರು. ಇದು ಆಸೀಸ್ ಸರದಿಯಲ್ಲಿ ದಾಖಲಾದ ಏಕೈಕ ಅರ್ಧ ಶತಕ. ಬ್ರಿಸ್ಬೇನ್‌ನ ಶತಕ ವೀರ ಮ್ಯಾಥ್ಯೂ ವೇಡ್ ಅವರದು ಅನಂತರದ ಹೆಚ್ಚಿನ ಗಳಿಕೆ (35).
Related Articles
Advertisement
ನಡುವೆ ಸ್ಮಿತ್, ಮ್ಯಾಕ್ಸ್‌ವೆಲ್, ವೇಡ್ ನೆರವಿಗೆ ನಿಂತರೂ ಕಾಂಗರೂ ಮೊತ್ತದಲ್ಲಿ ಭಾರೀ ಪ್ರಗತಿಯೇನೂ ಕಂಡು ಬರಲಿಲ್ಲ. ಕೊನೆಯ 5 ವಿಕೆಟ್‌ಗಳು ಕೇವಲ 27 ರನ್ ಅಂತರದಲ್ಲಿ ಉರುಳಿದ್ದೇ ಇದಕ್ಕೆ ಸಾಕ್ಷಿ.
ಖ್ವಾಜಾ (17)-ವಾರ್ನರ್ (16) ಮೊದಲ ವಿಕೆಟಿಗೆ 31 ರನ್ ಪೇರಿಸಿದ ಬಳಿಕ ಬೇರ್ಪಟ್ಟರು. ಮಿಚೆಲ್ ಮಾರ್ಷ್ ಅವರದು ಶೂನ್ಯ ಸಂಪಾದನೆ. ಈ 3 ವಿಕೆಟ್ ಉರುಳುವಾಗ ಆಸೀಸ್ ಸ್ಕೋರ್‌ಬೋರ್ಡ್ ಕೇವಲ 41 ರನ್ ತೋರಿಸು ತ್ತಿತ್ತು. ಹೆಡ್ (29), ಮ್ಯಾಕ್ಸ್‌ವೆಲ್ (23) ಕೂಡ ಬ್ಯಾಟಿಂಗ್ ವಿಸ್ತರಿಸಲು ವಿಫಲರಾದರು. ಸ್ಮಿತ್-ವೇಡ್ 6ನೇ ವಿಕೆಟಿಗೆ 65 ರನ್ ಪೇರಿಸಿದ್ದೇ ಆಸೀಸ್ ಸರದಿಯ ದೊಡ್ಡ ಜತೆಯಾಟ.
ಸ್ಮಿತ್ 60 ರನ್ನಿಗೆ 101 ಎಸೆತ ತೆಗೆದುಕೊಂಡರು. ಹೊಡೆ ದದ್ದು ಎರಡೇ ಫೋರ್. ವೇಡ್ 56 ಎಸೆತ ಎದುರಿಸಿ 35 ರನ್ ಮಾಡಿದರು. ಇದರಲ್ಲಿ 3 ಬೌಂಡರಿ ಸೇರಿತ್ತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-48.2 ಓವರ್‌ಗಳಲ್ಲಿ 220 (ಸ್ಮಿತ್ 60, ವೇಡ್ 35, ಹೆಡ್ 29, ಆಮಿರ್ 47ಕ್ಕೆ 3, ಇಮಾದ್ 37ಕ್ಕೆ 2, ಜುನೇದ್ 40ಕ್ಕೆ 2). ಪಾಕಿಸ್ಥಾನ-47.4 ಓವರ್‌ಗಳಲ್ಲಿ 4 ವಿಕೆಟಿಗೆ 221 (ಹಫೀಜ್ 72, ಮಲಿಕ್ ಔಟಾಗದೆ 42, ಆಜಂ 34, ಶಾರ್ಜೀಲ್ 29, ಸ್ಟಾರ್ಕ್ 45ಕ್ಕೆ 2, ಫಾಕ್ನರ್ 35ಕ್ಕೆ 2). ಪಂದ್ಯಶ್ರೇಷ್ಠ: ಹಫೀಜ್.