Advertisement

ಬಾಂಗ್ಲಾ ಟೆಸ್ಟ್‌ ಅಹ್ವಾನವನ್ನು ತಿರಸ್ಕರಿಸಿದ ಪಾಕ್‌

09:51 AM Jan 06, 2020 | Team Udayavani |

ಕರಾಚಿ: ಬಾಂಗ್ಲಾದೇಶದಲ್ಲಿ ಟೆಸ್ಟ್‌ ಆಡುವ ಮನವಿಯನ್ನು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ತಿರಸ್ಕರಿಸಿದೆ. ಪಾಕಿಸ್ಥಾನದಲ್ಲಿ ಒಂದು ಟೆಸ್ಟ್‌ ಪಂದ್ಯವನ್ನು ನಾವು ಆಡಲು ಸಿದ್ಧ ಆದರೆ ಎರಡನೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಡಿ ಬರುವ ಪಂದ್ಯವನ್ನು ತಮ್ಮ ತವರಾದ ಢಾಕಾದಲ್ಲಿ ಪಾಕಿಸ್ಥಾನ ಆಡಬೇಕೆಂದು (ಬಿಸಿಬಿ) ಬೇಡಿಕೆ ಇರಿಸಿದೆ ಆದರೆ ಪಿಸಿಬಿ ಈ ಮನವಿಯನ್ನು ನೇರವಾಗಿ ತಿರಸ್ಕರಿಸಿದೆ.

Advertisement

ಇದಕ್ಕೂ ಮೊದಲು ಪಾಕಿಸ್ಥಾನದಲ್ಲಿ ನಡೆಯಲಿರುವ ಟಿ20 ಪಂದ್ಯಗಳಲ್ಲಿ ಆಡಲು ಬಾಂಗ್ಲಾದೇಶ ಸಿದ್ಧವಿದೆ. ಆದರೆ ಟೆಸ್ಟ್‌ ಸರಣಿ ಮಾತ್ರ ತಟಸ್ಥ ತಾಣದಲ್ಲಿ ನಡೆಯಲಿ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಜಾಮುದ್ದಿನ್‌ ಚೌಧರಿ ಪಿಸಿಬಿಗೆ ಮನವಿ ಮಾಡಿದ್ದರು ಇದಕ್ಕೆ ಪಿಸಿಬಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಈ ಕಾರಣದಿಂದ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಒಂದು ನಿರ್ಧಾರಕ್ಕೆ ಬಂದು ನಾವು ಪಾಕ್‌ ವಿರುದ್ಧ ಟೆಸ್ಟ್‌ ಆಡುವುದಾದರೆ ಒಂದು ಪಂದ್ಯ ಬಾಂಗ್ಲಾದಲ್ಲಿ ನಡೆಯಬೇಕು ಎಂದು ಬೇಡಿಕೆ ಇರಿಸಿತ್ತು. ಆದರೆ ಪಿಸಿಬಿ ಎರಡು ಟೆಸ್ಟ್‌ ಪಂದ್ಯವೂ ಪಾಕಿಸ್ಥಾನದಲ್ಲೇ ನಡೆಯಬೇಕು ಎಂದು ಹೇಳಿ ಬಾಂಗ್ಲಾ ಮನವಿಯನ್ನು ತಿರಸ್ಕರಿಸಿದೆ. ಒಟ್ಟಾರೆಯಾಗಿ ಇದೀಗ ಬಾಂಗ್ಲಾ ಪಾಕ್‌ ನೆಲದಲ್ಲಿ ಟೆಸ್ಟ್‌ ಆಡಲು ಸಮ್ಮತಿ ಸೂಚಿಸುತ್ತದೋ ಎನ್ನುವುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next