Advertisement

ಭಯೋತ್ಪಾದನೆ ನಿಗ್ರಹಕ್ಕೆ ಬದ್ಧ: ಪಾಕ್‌

06:00 AM May 24, 2018 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ನಡೆಯುತ್ತಿರು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ, ಭಯೋತ್ಪಾದನೆ ನಿರ್ಮೂಲನೆಗೆ ಪ್ರಾದೇಶಿಕ ದೇಶಗಳೊಂದಿಗೆ ಕೈಜೋಡಿಸಲು ಸಿದ್ಧವಿರುವುದಾಗಿ ಪಾಕಿಸ್ಥಾನ ಹೇಳಿದೆ. ಭಾರತ, ಚೀನ, ಕಜಕಿಸ್ಥಾನ ಕಿರ್ಗಿಸ್ತಾನ, ರಷ್ಯಾ, ತಜಿಕಿಸ್ಥಾನ‌, ಉಜ್ಬೆಕಿಸ್ಥಾನದ ಪ್ರತಿನಿಧಿಗಳು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಉಗ್ರರನ್ನು ಪಾಕ್‌ ಪೋಷಿಸುತ್ತಿದೆ ಎಂಬ ಕಾರಣಕ್ಕೆ 2016ರಲ್ಲಿ ಸಾರ್ಕ್‌ ಸಮ್ಮೇಳನದಲ್ಲಿ ಭಾರತ ಭಾಗವಹಿಸಿರಲಿಲ್ಲ. ಆದರೆ ಎಸ್‌ಸಿಒ ಸಭೆಗೆ ಭಾರತ ಹಾಜರಾಗಿದ್ದು ಮಹತ್ವದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next