Advertisement
“ಶೇರ್ ಎ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂ’ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿದ ಬಾಂಗ್ಲಾದೇಶಕ್ಕೆ ಗಳಿಸಲು ಸಾಧ್ಯವಾದದ್ದು 7ಕ್ಕೆ 127 ರನ್ ಮಾತ್ರ. ಇದನ್ನು ಬೆನ್ನಟ್ಟುವ ಹಾದಿಯ ಕೊನೆಯಲ್ಲಿ ಪಾಕ್ ತೀವ್ರ ಒತ್ತಡಕ್ಕೆ ಸಿಲುಕಿತು. 3 ಓವರ್‌ಗಳಿಂದ 32 ರನ್ ತೆಗೆಯುವ ಸವಾಲು ಎದುರಾಯಿತು. 4 ವಿಕೆಟ್‌ಗಳಷ್ಟೇ ಉಳಿದಿತ್ತು. ಆದರೆ ಶದಾಬ್ ಖಾನ್-ಮೊಹಮ್ಮದ್ ನವಾಜ್ ಸಾಹಸದಿಂದ 19.2 ಓವರ್‌ಗಳಲ್ಲಿ 6 ವಿಕೆಟಿಗೆ 132 ರನ್ ಮಾಡಿ ಗುರಿ ಮುಟ್ಟಿತು.
Related Articles
Advertisement
ಬಾಂಗ್ಲಾ ಪದ ಆಫಿಫ್ ಹೊಸೇನ್ 36, ಮೆಹೆದಿ ಹಸನ್ ಮಿರಾಜ್ ಅಜೇಯ 30 ರನ್ ಹೊಡೆದರು. 22ಕ್ಕೆ 3 ವಿಕೆಟ್ ಕಿತ್ತ ಹಸನ್ ಅಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-7 ವಿಕೆಟಿಗೆ 127 (ಆಫಿಫ್ 36, ಮಿರಾಜ್ ಔಟಾಗದೆ 30, ನುರುಲ್ 28, ಹಸನ್ ಅಲಿ 22ಕ್ಕೆ 3, ಮೊಹಮ್ಮದ್ ವಾಸಿಮ್ ಜೂ. 24ಕ್ಕೆ 2).
ಪಾಕಿಸ್ಥಾನ-19.2 ಓವರ್‌ಗಳಲ್ಲಿ 6 ವಿಕೆಟಿಗೆ 132 (ಫಕರ್ ಜಮಾನ್ 34, ಖುಷಿªಲ್ 34, ಶಬಾದ್ ಔಟಾಗದೆ 21, ಟಸ್ಕಿನ್ 31ಕ್ಕೆ 2). ಪಂದ್ಯಶ್ರೇಷ್ಠ: ಹಸನ್ ಅಲಿ.