Advertisement

ಪಾಕ್‌ ಪಂಜಾಬ್‌ ವಿಧಾನಸಭೆಯಲ್ಲಿ ಘಟನೆ: ಸ್ಪೀಕರ್‌ಗೆ ಕಪಾಳಮೋಕ್ಷ

11:33 PM Apr 16, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದ ವಿಧಾನಸಭೆಯಲ್ಲಿ ಶನಿವಾರ, ಇಮ್ರಾನ್‌ ಖಾನ್‌ ನೇತೃತ್ವದ ಇಮ್ರಾನ್‌ ಖಾನ್‌ರವರ ತೆಹ್ರೀಕ್‌-ಎ- ಇನ್ಸಾನ್‌ (ಪಿಟಿಐ) ಪಕ್ಷದ ಶಾಸಕರು, ಸ್ಪೀಕರ್‌ ದೋಸ್ತ್ ಮೊಹಮ್ಮದ್‌ ಮಜಾರಿ ಯವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

Advertisement

ಪಂಜಾಬ್‌ ಪ್ರಾಂತ್ಯಕ್ಕೆ ನೂತನ ಮುಖ್ಯ ಮಂತ್ರಿಗಳನ್ನು ಆಯ್ಕೆ ಮಾಡುವ ಸಂಬಂಧ ಶನಿವಾರ ವಿಶೇಷ ಕಲಾಪವನ್ನು ಕರೆಯಲಾಗಿತ್ತು. ಆಗ, ಪಿಟಿಐ ಸದಸ್ಯರು ಇತ್ತೀಚೆಗೆ, ತಮ್ಮದೇ ಪಕ್ಷದ ಸದಸ್ಯರು ವಿಪಕ್ಷಗಳ ಜತೆಗೆ ಕೈ ಜೋಡಿಸಿ ಕೇಂದ್ರ ದಲ್ಲಿದ್ದ ಇಮ್ರಾನ್‌ ಖಾನ್‌ ಸರಕಾರವನ್ನು ಉರುಳಿಸಿದ ಕುರಿತಾಗಿ ಕಿಡಿಕಾರ ತೊಡಗಿ ದರು. ಇವರನ್ನು ನಿಯಂತ್ರಿಸಲು ಮುಂದಾದ ಸ್ಪೀಕರ್‌ ವಿರುದ್ಧ ಸಿಟ್ಟಿಗೆದ್ದ ಪಿಟಿಐ ಸದಸ್ಯರು, ತಮ್ಮ ಡೆಸ್ಕ್ಗಳಲ್ಲಿ ನೀರು ಕುಡಿಯಲು ಇಟ್ಟಿದ್ದ ಲೋಟಗ ಳನ್ನು ಸ್ಪೀಕರ್‌ ಕಡೆಗೆ ಎಸೆದರು.

ಇದನ್ನೂ ಓದಿ:ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ ಸಾಗರ ಫೋಟೋಗ್ರಾಫರ್ ಕ್ಲಿಕ್!

ಇನ್ನೂ ಕೆಲವರು ಸ್ಪೀಕರ್‌ ಆಸನದ ಕಡೆಗೆ ಧಾವಿಸಿ ಬಂದು, ಸ್ಪೀಕರ್‌ಗೆ ಇರುವ ಸಾಂವಿಧಾನಿಕ ಘನತೆಯನ್ನೂ ಮರೆದು ಅವರ ಮೇಲೆ ನೇರವಾಗಿ ಹಲ್ಲೆಗೆ ಮುಂದಾ ದರು. ಈ ಸಂದರ್ಭದಲ್ಲಿ, ಸ್ಪೀಕ ರ್‌ ರವರಿಗೆ ಕಪಾಳಮೋಕ್ಷವೂ ಆಯಿತು!

ಇನ್ನೂ ಕೆಲವರು ಅವರ ತಲೆಗೂದಲನ್ನು ಹಿಡಿದುಕೊಂಡು ಎಳೆದಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪಿಟಿಐನ ಮೂವರು ಶಾಸಕರನ್ನು ಬಂಧಿಸಲಾಗಿದೆ.

Advertisement

ಮುಖ್ಯಮಂತ್ರಿ ಆಯ್ಕೆ : ಪಿಟಿಐ ಶಾಸಕರ ತೀವ್ರ ಗಲಾಟೆಯ ನಡುವೆಯೂ ಪಂಜಾಬ್‌ ಪ್ರಾಂತ್ಯಕ್ಕೆ ನೂತನ ಮುಖ್ಯಮಂತ್ರಿಯಾಗಿ ಪಿಎಂಎನ್‌-ಎಲ್‌ ಪಕ್ಷದ ಹಮ್ಜಾ ಶಹಬಾಜ್‌ ಅವರು ಆಯ್ಕೆಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next