Advertisement

ಕೋವಿಡ್ ನಿಯಮ ಉಲ್ಲಂಘಿಸಿದ ಪಾಕ್‌ ಪಿಎಂ ಇಮ್ರಾನ್‌ ಖಾನ್‌

08:07 PM Mar 26, 2021 | Team Udayavani |

ಇಸ್ಲಾಮಾಬಾದ್‌: ಕೊರೊನಾದಿಂದ ಬಳಲುತ್ತಿದ್ದರೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಇಸ್ಲಾಮಾಬಾದ್‌ನ ನಿವಾಸಕ್ಕೆ ಅಧಿಕಾರಿಗಳನ್ನು ಕರೆಯಿಸಿಕೊಂಡು ಸಭೆ ನಡೆಸಿದ್ದಾರೆ.

Advertisement

ಪ್ರಧಾನಿ ಖಾನ್‌ ನಡವಳಿಕೆ ಬಗ್ಗೆ ಪಾಕಿಸ್ತಾನದ ಪ್ರತಿಪಕ್ಷಗಳು, ಸಾರ್ವಜನಿಕರು ಕಟುವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ಶನಿವಾರ ಅವರಿಗೆ ಸೋಂಕು ದೃಢಪಟ್ಟಿತ್ತು. ಅಧಿಕಾರಿಗಳ ತಂಡದ ಜತೆಗೆ ಇಮ್ರಾನ್‌ ಖಾನ್‌ ಸಭೆ ನಡೆಸುತ್ತಿರುವ ಫೋಟೋವನ್ನು ವಾರ್ತಾ ಸಚಿವ ಶಿಬ್ಲಿ ಫ‌ಝಾì ಟ್ವೀಟ್‌ ಮಾಡಿದ್ದರು.

ಪ್ರಧಾನಿಯೇ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ದೇಶದಲ್ಲಿ 3ನೇ ಹಂತದ ಸೋಂಕು ಹಬ್ಬುತ್ತಿರುವ ವೇಳೆ ಇಂಥ ನಡವಳಿಕೆ ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಘಟನೆಯಿಂದಾಗಿ ಸರ್ಕಾರ ತೀರಾ ಮುಜುಗರಕ್ಕೆ ಒಳಗಾಗಿದೆ.

ಇದನ್ನೂ ಓದಿ :ಸೈರಸ್‌ ಮಿಸ್ತ್ರಿ ಪದಚ್ಯುತಿ ಪ್ರಕರಣ: ಟಾಟಾ ಗ್ರೂಪ್‌ಗೆ ಸುಪ್ರೀಂನಲ್ಲಿ ಗೆಲುವು

Advertisement

Udayavani is now on Telegram. Click here to join our channel and stay updated with the latest news.

Next