Advertisement

ಕರ್ತಾರ್ಪುರ ಕಾರಿಡಾರ್‌ಗೆ 100 ಕೋಟಿ ಕೊಟ್ಟ ಪಾಕ್‌

02:33 AM Jun 12, 2019 | sudhir |

ಇಸ್ಲಾಮಾಬಾದ್‌: ಪಾಕಿಸ್ಥಾನ ಸರಕಾರವು ತನ್ನ 2019-20ರ ಬಜೆಟ್‌ನಲ್ಲಿ ಬಹುನಿರೀಕ್ಷಿತ ಕರ್ತಾರ್ಪುರ ಕಾರಿಡಾರ್‌ ನಿರ್ಮಾಣಕ್ಕಾಗಿ ಬರೋಬ್ಬರಿ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ. ಭಾರತದ ಗುರುದಾಸ್ಪುರದ ಡೇರಾ ಬಾಬಾ ನಾನಕ್‌ ಹಾಗೂ ಪಾಕ್‌ನ ಕರ್ತಾರ್ಪುರದಲ್ಲಿರುವ ದರ್ಬಾರ್‌ ಸಾಹಿಬ್‌ ನಡುವೆ ಸಂಪರ್ಕ ಕಲ್ಪಿಸುವ ಈ ಯೋಜನೆ ಜಾರಿಗೆ ಬಂದಾಗ, ಭಾರತೀಯ ಸಿಕ್ಖ್ ಯಾತ್ರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. 100 ಕೋಟಿ ರೂ.ಗಳ ಮೊತ್ತವನ್ನು ಭೂಸ್ವಾಧೀನ, ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಪಾಕ್‌ ತಿಳಿಸಿದೆ. ಒಟ್ಟಾರೆ ಈ ಯೋಜನೆಯ ಮೊತ್ತವನ್ನು 300 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದೇ ವೇಳೆ, ಪಾಕಿಸ್ಥಾನದ ರಕ್ಷಣಾ ಬಜೆಟ್‌ನಲ್ಲಿ ಬದಲಾವಣೆ ಮಾಡಿಲ್ಲ. ಹಿಂದೆ ನೀಡಿದ್ದಂತೆ, 1,150 ಶತಕೋಟಿ ರೂ. ನೀಡಲಾಗಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next