Advertisement

ಗಿಲ್ಗಿಟ್, ಬಾಲ್ಟಿಸ್ತಾನ್ ಪಾಕ್ ಭಾಗವಲ್ಲ, ಕ್ರೌರ್ಯ ನಿಲ್ಸಿ; ಖಾನ್

03:59 PM Aug 12, 2017 | Sharanya Alva |

ನವದೆಹಲಿ: ಸ್ಥಳೀಯರ ಮೇಲೆ ಅಮಾನವೀಯ ಕೃತ್ಯ ನಡೆಸುತ್ತಿರುವ ಪಾಕಿಸ್ತಾನದ ಪಡೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ರಾಜಕಾರಣಿ ಮಿಸ್ಫಾರ್ ಖಾನ್, ಗಿಲ್ಗಿಟ್, ಬಾಲ್ಟಿಸ್ತಾನ್ ಪಾಕಿಸ್ತಾನದ ಭಾಗವಲ್ಲ ಎಂದು ತಿಳಿಸಿದ್ದಾರೆ.

Advertisement

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ರಾಜಕೀಯ ಪಕ್ಷಗಳು ಲೂಟಿ ಮಾಡುವುದಲ್ಲದೆ, ಜನರ ಮನಸ್ಸನ್ನು ಕೆಡಿಸುತ್ತಿವೆ. ಹಾಗಾಗಿ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ನಲ್ಲಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಬೀಳಬೇಕು ಎಂದು ಖಾನ್ ಹೇಳಿದರು.

ಪಾಕಿಸ್ತಾನ ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಗಿಲ್ಗಿಟ್, ಬಾಲ್ಟಿಸ್ತಾನ್ ಅನ್ನು ಉಗ್ರರ ಆಶ್ರಯತಾಣವನ್ನಾಗಿ ಮಾಡಿದೆ. ಹಾಗಾಗಿ ತಮಗೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ಬೇಕಾಗಿದೆ ಎಂದು ಬ್ರಿಟನ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ.ಖಾನ್ ಅಭಿಪ್ರಾಯವ್ಯಕ್ತಪಡಿಸಿದರು.

ಅಷ್ಟೇ ಅಲ್ಲ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಾಗೂ ಗಿಲ್ಗಿಟ್, ಬಾಲ್ಟಿಸ್ತಾನದಲ್ಲಿ ಪಾಕಿಸ್ತಾನ ರಾಜಕೀಯ ಪಕ್ಷಗಳು ತೆರೆದಿರುವ ಅಂಗಡಿಗಳನ್ನು ಮುಚ್ಚಬೇಕಾಗಿದೆ. ಜನರನ್ನು ಉದ್ರೇಕಗೊಳಿಸುವ ಕೆಲಸಕ್ಕೂ ಕಡಿವಾಣ ಹಾಕಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next