Advertisement

ಭಾರತ ಬಾಪ್‌ ಎಂದ ಜಾಹೀರಾತಿಗೆ ಪಾಕಿಸ್ಥಾನ ಆಕ್ಷೇಪ

01:51 AM Jun 17, 2019 | Team Udayavani |
ಲಂಡನ್‌: ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾದ ಒಂದು ಜಾಹೀರಾತು ಪಾಕಿಸ್ಥಾನವನ್ನು ಕೆರಳಿಸಿದ್ದು, ಈ ಕುರಿತು ಐಸಿಸಿಗೆ ದೂರು ನೀಡಿದೆ.

ರವಿವಾರದ ಪಂದ್ಯದ ಕುರಿತು ತಯಾರಿಸಲಾದ ಈ ಜಾಹೀರಾತಿನಲ್ಲಿ ಭಾರತ, ಪಾಕಿಸ್ಥಾನದ ‘ಬಾಪ್‌’ ಎಂಬರ್ಥ ಬರುವ ಸನ್ನಿವೇಶವೊಂದಿದ್ದು, ಇದು ಪಾಕಿಸ್ಥಾನದ ಆಕ್ಷೇಪಕ್ಕೆ ಕಾರಣ. ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಯೊಬ್ಬ ಪಾಕಿಸ್ಥಾನದ ಅಭಿಮಾನಿಯಲ್ಲಿ ರವಿವಾರದ ಪಂದ್ಯದ ಕುರಿತು ಮಾತನಾಡುತ್ತಾನೆ. ಪಾಕ್‌ ಅಭಿಮಾನಿ, ನನ್ನ ಅಬ್ಬು (ತಂದೆ) ಸತತವಾಗಿ ಪ್ರಯತ್ನಿಸುತ್ತಿರಬೇಕೆಂದು (ಭಾರತದ ವಿರುದ್ಧ ಗೆಲ್ಲಲು) ಹೇಳುತ್ತಿರುತ್ತಾರೆ ಎಂದು ಹೇಳುತ್ತಾನೆ.

ಆಗ ಪಕ್ಕದಲ್ಲಿದ್ದ ಭಾರತದ ಅಭಿಮಾನಿ ಮೈನೇ ಕಬ್‌ ಕಹಾ? (ನಾನ್ಯಾವಾಗ ಹೇಳಿದ್ದೇನೆ) ಎಂದು ಕೇಳುತ್ತಾನೆ. ಇದಿಷ್ಟು ಜಾಹೀರಾತಿನಲ್ಲಿರುವ ಅಂಶ. ತನ್ನನ್ನು ಅವಹೇಳನ ಮಾಡುವ ಉದ್ದೇಶದಿಂದಲೇ ಈ ಜಾಹೀರಾತು ತಯಾರಿಸಲಾಗಿದೆ ಎನ್ನುವುದು ಪಾಕ್‌ ದೂರು.
Advertisement
Advertisement

Udayavani is now on Telegram. Click here to join our channel and stay updated with the latest news.

Next