Advertisement

ಪಾಕ್ ಕ್ರಿಕೆಟ್ ಗೆ ಮೇಜರ್ ಸರ್ಜರಿ: ಮೂರು ಮಾದರಿಗೆ ಮೂವರು ನಾಯಕ

10:25 AM Oct 19, 2019 | keerthan |

ಇಸ್ಲಮಾಬಾದ್: ಇತ್ತೀಚೆಗೆ ಟಿ ಟ್ವೆಂಟಿ ಸರಣಿಯನ್ನು ವೈಟ್ ವಾಶ್ ರೀತಿಯಲ್ಲಿ ಸೋತ ಪಾಕಿಸ್ಥಾನ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಮೂರು ಮಾದರಿ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮದ್ ರನ್ನು ಕೇವಲ ಏಕದಿನಕ್ಕೆ ಸೀಮಿತಗೊಳಿಸಿದ್ದು, ಉಳಿದೆರಡು ಮಾದರಿಗೆ ಹೊಸಬರ ಆಯ್ಕೆಯಾಗಿದೆ.

Advertisement

ಪಾಕಿಸ್ಥಾನ ಕ್ರಿಕೆಟ್ ಬೋರ್ಡ್ ಈ ಬಗ್ಗೆ ಶುಕ್ರವಾರ ಪ್ರಕಟಿಸಿದ್ದು, ಟೆಸ್ಟ್ ನಾಯಕತ್ವವನ್ನು ಅಜರ್ ಅಲಿಗೆ ಮತ್ತು ಟಿ ಟ್ವೆಂಟಿ ನಾಯಕತ್ವವನ್ನು ಬಾಬರ್ ಅಜಂಗೆ ವಹಿಸಲಾಗಿದೆ. ಸರ್ಫರಾಜ್ ಅಹಮದ್ ಏಕದಿನ ತಂಡಕ್ಕೆ ಮಾತ್ರ ನಾಯಕನಾಗಿ ಮುಂದುವರಿಯಲಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ಗೆ ಸರಿಯಾಗಿ ಒಂದು ವರ್ಷ ಬಾಕಿ ಇರುವಾಗ ಪಾಕಿಸ್ಥಾನ ಈ ದೊಡ್ಡ ನಿರ್ಧಾರ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next