Advertisement

ಟಿ20 : ಪಾಕ್‌ ತಂಡದಲ್ಲಿ ಮೊಯಿನ್‌ ಖಾನ್‌ ಪುತ್ರ ಆಜಂ ಖಾನ್‌ ಗೆ ಅವಕಾಶ

09:45 PM Jun 04, 2021 | Team Udayavani |

ಕರಾಚಿ  ವೆಸ್ಟ್‌ ಇಂಡಿಸ್‌ ಪ್ರವಾಸದಲ್ಲಿ ಆಡಲಾಗುವ ಮೂರೂ ಮಾದರಿಯ ಸರಣಿಗೆ ಪಾಕಿಸ್ಥಾನ ತಂಡಗಳನ್ನು ಅಂತಿಮಗೊಳಿಸಲಾಗಿದೆ. ಟಿ20 ತಂಡಕ್ಕೆ ಕ್ವೆಟ್ಟಾ ಗ್ಲೆಡಿಯರ್ನ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟ್ಸ್‌ಮನ್‌ ಆಜಂ ಖಾನ್‌ ಅವಕಾಶ ಪಡೆದಿದ್ದಾರೆ. ಇವರು ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಮೊಯಿನ್‌ ಖಾನ್‌ ಅವರ ಪುತ್ರ ಎಂಬುದು ವಿಶೇಷ.

Advertisement

ಯುವ ವೇಗಿ ನಸೀಮ್‌ ಶಾ ಮತ್ತು ಸೀಮರ್‌ ಮೊಹಮ್ಮದ್‌ ಅಬ್ಟಾಸ್‌ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ಕಳೆದ ವರ್ಷ ನ್ಯೂಜಿಲ್ಯಾಂಡ್‌ನ‌ಲ್ಲಿ 2-0 ವೈಟ್‌ವಾಶ್‌ ಅನುಭವಿಸಿದ ಬಳಿಕ ಇಬ್ಬರನ್ನೂ ತಂಡದಿಂದ ಕೈಬಿಡಲಾಗಿತ್ತು. ಮೂರೂ ತಂಡಗಳನ್ನು ಬಾಬರ್‌ ಆಜಂ ಮುನ್ನಡೆಸಲಿದ್ದಾರೆ.

ಪಾಕಿಸ್ಥಾನ ಟೆಸ್ಟ್‌ ತಂಡ: ಬಾಬರ್‌ ಆಜಂ (ನಾಯಕ), ಮೊಹಮ್ಮದ್‌ ರಿಜ್ವಾನ್‌, ಅಬ್ದುಲ್ಲ ಶಫೀಕ್‌, ಅಬಿದ್‌ ಅಲಿ, ಅಜರ್‌ ಅಲಿ, ಫಾಹಿಮ್‌ ಅಶ್ರಫ್, ಫ‌ವಾದ್‌ ಆಲಂ, ಹ್ಯಾರಿಸ್‌ ರವೂಫ್, ಹಸನ್‌ ಅಲಿ, ಇಮ್ರಾನ್‌ ಬಟ್‌, ಮೊಹಮ್ಮದ್‌ ಅಬ್ಟಾಸ್‌, ಮೊಹಮ್ಮದ್‌ ನವಾಜ್‌, ನಸೀಮ್‌ ಶಾ, ನೌಮಾನ್‌ ಅಲಿ, ಸಾಜಿದ್‌ ಖಾನ್‌, ಸರ್ಫರಾಜ್ ಅಹ್ಮದ್‌, ಸೌದ್‌ ಶಕೀಲ್‌, ಶಾಹೀನ್‌ ಅಫ್ರಿದಿ, ಶಹಾನವಾಜ್‌ ದಹಾನಿ, ಯಾಸಿರ್‌ ಶಾ, ಜಾಹಿದ್‌ ಮಹಮೂದ್‌.

ಇದನ್ನೂ ಓದಿ :ಸಿಂಧೂರಿ  v/s ಶಿಲ್ಪಾನಾಗ್ : ಇನ್ನೂ ಮುಗಿದಿಲ್ಲ ಐಎಎಸ್ ಅಧಿಕಾರಿ ಸಮರ..!

ಪಾಕ್‌ ಟಿ20 ತಂಡ: ಬಾಬರ್‌ ಆಜಂ (ನಾಯಕ), ಶಾದಾಬ್‌ ಖಾನ್‌, ಅರ್ಶದ್‌ ಇಕ್ಬಾಲ್‌, ಆಜಂ ಖಾನ್‌, ಫಾಹೀಮ್‌ ಅಶ್ರಫ್, ಫ‌ಕಾರ್‌ ಜಮಾನ್‌, ಹೈದರ್‌ ಅಲಿ, ಹ್ಯಾರಿಸ್‌ ರವೂಫ್, ಹಸನ್‌ ಅಲಿ, ಇಮಾದ್‌ ವಾಸಿಂ, ಮೊಹಮ್ಮದ್‌ ಹಫೀಜ್‌, ಮೊಹಮ್ಮದ್‌ ಹಸ್ನೇನ್‌, ಮೊಹಮ್ಮದ್‌ ನವಾಜ್‌, ಮೊಹಮ್ಮದ್‌ ರಿಜ್ವಾನ್‌, ಮೊಹಮ್ಮದ್‌ ವಾಸಿಂ ಜೂ., ಸಫ‌ìರಾಜ್‌ ಅಹ್ಮದ್‌, ಶಾಹೀನ್‌ ಅಫ್ರಿದಿ, ಶಾರ್ಜೀಲ್‌ ಖಾನ್‌, ಉಸ್ಮಾನ್‌ ಕಾದಿರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next