Advertisement
ಈ ಸಂಬಂಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ನಡೆಸಿದ ಉನ್ನತ ಮಟ್ಟದ ಭದ್ರತಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಾಕಿಸ್ಥಾನ ಸರಕಾರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಿಸಲಾಗಿದೆ. ತೆಗೆದುಕೊಂಡ ಕ್ರಮಗಳ ಬಗ್ಗೆ ಅದು ಪ್ರಕಟಿಸಿದ್ದು, ಹೀಗೆ ಹೇಳಿದೆ.1. ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ಕೆಳಕ್ಕಿಳಿಸುವುದು
3. ಭಾರತದಲ್ಲಿರುವ ಪಾಕಿಸ್ತಾನಿ ರಾಯಭಾರಿಯನ್ನು ವಾಪಾಸ್ ಕರೆಸಿಕೊಳ್ಳುವುದು.
4. ದ್ವಿಪಕ್ಷೀಯ ವ್ಯಾಪಾರ-ವಹಿವಾಟು ರದ್ದು
5. ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಪರಿಶೀಲನೆ
6. 370 ರದ್ದುಗೊಳಿಸಿದ ಭಾರತದ ಕ್ರಮದ ವಿರುದ್ಧ ವಿಶ್ವಸಂಸ್ಥೆಗೆ ದೂರು ಸಲ್ಲಿಸುವುದು.
7. ಆಗಸ್ಟ್ 14ನ್ನು ಧೈರ್ಯ ಪ್ರದರ್ಶಿಸಿದ ಕಾಶ್ಮೀರಿಗಳೊಂದಿಗೆ ಏಕತಾ ದಿನವನ್ನಾಗಿ ಆಚರಿಸುವುದು. ಇದರೊಂದಿಗೆ ಪಾಕ್ ಇನ್ನಷ್ಟು ರಾಜತಾಂತ್ರಿಕ ಕ್ರಮಕ್ಕೆ ಮುಂದಾಗಬಹುದು. ಮುಂದಿನ ದಿನಗಳಲ್ಲಿ ತನ್ನ ರಾಯಭಾರಿಯನ್ನು ಭಾರತದಿಂದ ವಾಪಸ್ ಕರೆಸಿಕೊಳ್ಳುವುದು ಮತ್ತು ಭಾರತದ ರಾಯಭಾರಿಯನ್ನು ತನ್ನ ದೇಶದಿಂದ ಹೊರಗಟ್ಟು ಕ್ರಮಕ್ಕೂ ಮುಂದಾಗಬಹುದು ಎಂದು ಹೇಳಲಾಗಿದೆ.