Advertisement

ಹೋರಾಟಕ್ಕೆ ಕಪ್ಪು ಚುಕ್ಕೆ: ಕೇಂದ್ರ ಸರಕಾರ ಕಟುವಾಗಿ ಆಕ್ರೋಶ

11:40 PM Oct 19, 2022 | Team Udayavani |

ವಾಷಿಂಗ್ಟನ್‌/ಹೊಸದಿಲ್ಲಿ: ಪ್ಯಾರಿಸ್‌ ಮೂಲದ ಫೈನಾನ್ಶಿಯಲ್‌ ಆ್ಯಕ್ಷನ್‌ ಟಾಸ್ಕ್ ಫೋರ್ಸ್‌ (ಎಫ್ಎಟಿಎಫ್)ನ ಬೂದು ಪಟ್ಟಿಯಿಂದ ಪಾಕಿಸ್ಥಾನವನ್ನು ಕೈಬಿಟ್ಟ ಬಗ್ಗೆ ಕೇಂದ್ರ ಸರಕಾರ ಕಟುವಾಗಿ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಇದೊಂದು ಕಪ್ಪು ಚುಕ್ಕೆ ಎಂದು ಅದು ಪ್ರತಿಪಾದಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ “ಭಾರತದ ನೆರೆಯ ರಾಷ್ಟ್ರ ನಮ್ಮ ಜತೆಗೆ ಶಾಂತಿಯನ್ನು ಬಯಸುತ್ತಿಲ್ಲ.

ಭಯೋತ್ಪಾದನೆಗೆ ಯಾವ ರಾಷ್ಟ್ರ ಬೆಂಬಲ ನೀಡುತ್ತಿದೆ ಎಂಬ ಬಗ್ಗೆ ಜಗತ್ತು ಗಮನಿಸುತ್ತಿದೆ. ವಿದೇಶಾಂಗ ಸಚಿವಾಲಯ ಈ ಬಗ್ಗೆ ಸೂಕ್ತ ಚಿಂತನೆ ನಡೆಸಿ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next