Advertisement

Hyderabad; ಪತ್ನಿ ಭೇಟಿಗಾಗಿ ಭಾರತಕ್ಕೆ ಪ್ರವೇಶಿಸಿದ ಪಾಕ್ ವ್ಯಕ್ತಿಯ ಬಂಧನ

08:40 PM Sep 01, 2023 | Team Udayavani |

ಹೈದರಾಬಾದ್‌ : ನಗರದಲ್ಲಿದ್ದ ಪತ್ನಿಯನ್ನು ಭೇಟಿಯಾಗಲೆಂದು ನವೆಂಬರ್ 2022 ರಲ್ಲಿ ನೇಪಾಳ ಗಡಿಯ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ಥಾನದ ವ್ಯಕ್ತಿಯನ್ನು ಬಂಧಿಸಲಾಗಿದೆ.

Advertisement

ಪಾಕಿಸ್ಥಾನದ ಖೈಬರ್ ಪಖ್ತುಂಖ್ವಾ ಪ್ರದೇಶದಿಂದ ಬಂದ ಫೈಜ್ ಮೊಹಮ್ಮದ್ (24) ಮಾನ್ಯ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೆ ಕಾಠ್ಮಂಡು ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸರಿಯಾದ ದಾಖಲೆಗಳಿಲ್ಲದೆ ವಾಸಿಸುತ್ತಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಕ್ರಮ ಕೈಗೊಂಡಿದ್ದೇವೆ. ಮೊಹಮ್ಮದ್ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಹೈದರಾಬಾದ್ ದಕ್ಷಿಣ ವಲಯ ಡಿಸಿಪಿ ಪಿ ಸಾಯಿ ಚೈತನ್ಯ ತಿಳಿಸಿದ್ದಾರೆ.

ಫೈಜ್ ಮೊಹಮ್ಮದ್ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡಲು ಡಿಸೆಂಬರ್ 2019 ರಲ್ಲಿ ಶಾರ್ಜಾಕ್ಕೆ ಹೋಗಿದ್ದ, ಹೈದರಾಬಾದ್‌ನ ನೇಹಾ ಫಾತಿಮಾ (29) ಎಂಬ ಭಾರತೀಯ ಮಹಿಳೆಯನ್ನು ಭೇಟಿಯಾಗಿದ್ದ.ಮೊಹಮ್ಮದ್ ಫಾತಿಮಾಗೆ ಟೈಲರ್ ಆಗಿ ಕೆಲಸ ಮಾಡಲು ಸಹಾಯ ಮಾಡಿದ್ದು ಬಳಿಕ ಪ್ರೇಮಾಂಕುರವಾಗಿ ಇಬ್ಬರೂ ವಿವಾಹವಾದರು. ಫಾತಿಮಾಗೆ ಈಗ ಮೂರು ವರ್ಷದ ಗಂಡು ಮಗುವಿದೆ ಎಂದು ಉನ್ನತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next