Advertisement

ಪಾಕಿಸ್ಥಾನ : ಇನ್ನೂ ಬಗೆಹರಿಯದ ಸಂಪೂರ್ಣ ಲಾಕ್‌ಡೌನ್‌ ಗೊಂದಲ

09:06 AM Apr 04, 2020 | sudhir |

ಕರಾಚಿ: ಪಾಕಿಸ್ಥಾನದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಇರಾನ್‌ ಗಡಿ ಪ್ರದೇಶ ತಫ್ತಾನ್‌ನಲ್ಲಿರುವ ಕ್ವಾರಂಟೈನ್‌ ಶಿಬಿರದಲ್ಲಿ ಶುಚಿತ್ವದ ಕೊರತೆ ಮತ್ತು ಸರಿಯಾದ ತಪಾಸಣೆ ನಡೆಯದೇ ಇರುವುದರಿಂದ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಆ ಶಿಬಿರದಲ್ಲಿ ಜನರನ್ನು ಬೇಕಾಬಿಟ್ಟಿಯಾಗಿ ತುಂಬಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ಕಾರಣಕ್ಕೆ ಸೋಂಕು ಪಾಕ್‌ ನಲ್ಲಿ ಮತ್ತಷ್ಟು ಮಂದಿಗೆ ಹರಡುವ ಆತಂಕ ಎದುರಾಗಿದೆ.

Advertisement

ಪಾಕ್‌ನಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆ ಇರಾನ್‌ ಕೂಡ ಕಳವಳ ವ್ಯಕ್ತಪಡಿಸಿದೆ. ಇಷ್ಟೆಲ್ಲಾ ಅನಾಹುತಗಳು ನಡೆಯುತ್ತಿದ್ದರೂ ಪಾಕಿಸ್ಥಾನ ಸರಕಾರವು ಸಂಪೂರ್ಣ ಲಾಕ್‌ ಡೌನ್‌ನತ್ತ ಮನಸ್ಸು ಮಾಡಿಲ್ಲ. ಕೆಲವಡೆ ಮಾತ್ರ ಲಾಕ್‌ಡೌನ್‌ ಆದೇಶವಾಗಿದೆ. ಆಶಾದಾಯಕ ಸಂಗತಿಯೆಂದರೆ, ಆ ಪ್ರದೇಶಗಳಲ್ಲಿ ಸೋಂಕು ಹರಡುವಿಕೆ ಕಡಿಮೆಯಾಗಿದೆ.

ಆದರೆ ಲಾಕ್‌ಡೌನ್‌ ಆಗಿರುವ ಕಡೆಯಲ್ಲೂ ಜನರು ಅಧಿಕಾರಿಗಳ ಆದೇಶವನ್ನು ಸಂಪೂರ್ಣ ಪಾಲಿಸುತ್ತಿಲ್ಲ. ಇದು ಸೋಂಕು ಹರಡುವುದಕ್ಕೆ ಮತ್ತೂಂದು ಕಾರಣವಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಹೊರಗೆ ಬನ್ನಿ, ಮನೆಯೊಳಗೇ ಇರಿ ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರೂ ಜನರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಜನರ ನಿಯಂತ್ರಣವೇ ಸಮಸ್ಯೆ
ಕೆಲವೆಡೆ ಓಡಾಡುತ್ತಿರುವ ಜನರನ್ನು ಭದ್ರತಾ ಸಿಬಂದಿ ಕಡ್ಡಾಯವಾಗಿ ಮನೆಗೆ ವಾಪಸು ಕಳುಹಿಸುತ್ತಿದ್ದಾರೆ. ರೋಗ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ ಮಸೀದಿಗಳನ್ನು ಮುಚ್ಚಲಾಗಿಲ್ಲ. ಇತರ ಇಸ್ಲಾಮಿಕ್‌ ದೇಶಗಳಾದ ಸೌದಿ ಅರೇಬಿಯಾ ಮತ್ತು ಇರಾನ್‌ನಲ್ಲಿ ಮಸೀದಿಗಳು ಮುಚ್ಚಿವೆ. 110 ದಶಲಕ್ಷ ಜನರಿರುವ ಪಂಜಾಬ್‌ ಪ್ರಾಂತ್ಯದ ಮಸೀದಿಗಳಲ್ಲಿ ನಡೆಯುತ್ತಿದೆ.
ಪಾಕಿಸ್ಥಾನ ಸರಕಾರದ ಬೇಜವಾಬ್ದಾರಿತನಕ್ಕೆ ದೇಶದಲ್ಲೇ ಆಕ್ಷೇಪ ವ್ಯಕ್ತವಾಗುತ್ತಿದೆ ಎಂದು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ದೇಶವನ್ನು ಸಂಪೂರ್ಣವಾಗಿ ಮುಚ್ಚ ಬೇಕೊ ಇಲ್ಲವೋ ಎಂಬುದರ ಬಗ್ಗೆ ಸರಕಾರ ಇನ್ನೂ ಗೊಂದಲ ಎದುರಿಸುತ್ತಿದೆ. ಈ ಮಧ್ಯೆ ಕೊರೊನಾ ಹಿಮ್ಮೆಟ್ಟಿಸಲು ನಂಬಿಕೆಯ ಶಕ್ತಿಯಿಂದಲೇ ಸಾಧ್ಯ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿರುವುದು ಚರ್ಚೆಗೀಡಾಗಿದೆ.

Advertisement

ಪಾಕಿಸ್ಥಾನವು ಪ್ರಸ್ತುತ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಿದರೆ ಸಂಕಷ್ಟ ಮತ್ತಷ್ಟು ಹೆಚ್ಚುವ ಆತಂಕ ಸರಕಾರದ್ದು.

Advertisement

Udayavani is now on Telegram. Click here to join our channel and stay updated with the latest news.

Next