Advertisement

ಅರ್ಶದೀಪ್ ಸಿಂಗ್ ವಿಕಿಪೀಡಿಯಾ ಪುಟವನ್ನು ಟ್ಯಾಂಪರಿಂಗ್ ಮಾಡಿದ ಪಾಕಿಸ್ತಾನದ ಲಿಂಕ್

05:31 PM Sep 05, 2022 | Team Udayavani |

ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗ ಅರ್ಶದೀಪ್ ಸಿಂಗ್ ಅವರ ವಿಕಿಪೀಡಿಯಾ ಪುಟವನ್ನು ಎಡಿಟ್ ಮಾಡಲು ಬಳಸಲಾದ ಐಪಿ ವಿಳಾಸವು ಈ ಹಿಂದೆ ಪಾಕಿಸ್ತಾನಿ ಮಿಲಿಟರಿ ಮತ್ತು ಪರ್ವೇಜ್ ಮುಷರಫ್ ಅವರ ಮಾಹಿತಿಗಳನ್ನು ಎಡಿಟ್ ಮಾಡಿದ ಐಪಿ ವಿಳಾಸವಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಈ ಪಿತೂರಿಯ ಹಿಂದೆ ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಇದೆ. ಐಎಸ್ ಪಿಆರ್ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗವಾಗಿದೆ.

Advertisement

2014 ರಲ್ಲಿ, ಇದೇ ಐಪಿಯನ್ನು ಪಾಕಿಸ್ತಾನಿ ಮಿಲಿಟರಿಯ ಬಗ್ಗೆ ವಿಮರ್ಶಾತ್ಮಕ ಉಲ್ಲೇಖಗಳನ್ನು ಹೊಂದಿದ್ದ ಯುಎಇ ವಿಕಿಪೀಡಿಯಾ ಪುಟವನ್ನು ಎಡಿಟ್ ಮಾಡಲು ಬಳಸಲಾಗಿತ್ತು. ಭಾರತೀಯ ಕ್ರಿಕೆಟಿಗ ಅರ್ಶದೀಪ್ ಸಿಂಗ್ ಅವರು ಖಲಿಸ್ಥಾನಿ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ ಎಂದು ವಿಕಿಪೀಡಿಯಾ ಪುಟದಲ್ಲಿ ಸೇರಿಸಲು ರವಿವಾರ (ಸೆಪ್ಟೆಂಬರ್ 4) ಈ ಐಪಿ ವಿಳಾಸವನ್ನು ಬಳಸಲಾಗಿದೆ.

ಇಂದು ಮುಂಜಾನೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಭಾರತದ ವಿಕಿಪೀಡಿಯ ಕಾರ್ಯನಿರ್ವಾಹಕರನ್ನು ಕರೆಸಿದ್ದು, ಭಾರತೀಯ ಕ್ರಿಕೆಟಿಗ ಅರ್ಶದೀಪ್ ಸಿಂಗ್ ಅವರ ವಿಕಿಪೀಡಿಯಾ ಪುಟದಲ್ಲಿ ಖಲಿಸ್ತಾನ್ ಅಸೋಸಿಯೇಷನ್ ಗೆ ಸಂಬಂಧಿಸಿದಂತೆ ಹೇಗೆ ಬದಲಾಯಿಸಲಾಗಿದೆ ಎಂಬುದರ ಕುರಿತು ವಿವರಣೆ ಕೇಳಿದೆ.

ಇದನ್ನೂ ಓದಿ:ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ; ಏಳು ಮಂದಿ ಸಾವು

ಭಾನುವಾರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಐದು ವಿಕೆಟ್‌ಗಳ ಸೋಲಿನುಭವಿಸಿದೆ. ಈ ಪಂದ್ಯದಲ್ಲಿ ಅರ್ಶದೀಪ್ ಅವರು ಕ್ಯಾಚೊಂದನ್ನು ಕೈಚೆಲ್ಲಿದ್ದರು. ಇದು ಭಾರೀ ಟೀಕೆಗೆ ಒಳಗಾಗಿದೆ. ಇದರ ಬಳಿಕ ವಿಕಿಪೀಡಿಯಾ ಪುಟದಲ್ಲಿ ಈ ಬದಲಾವಣೆ ಮಾಡಲಾಗಿದೆ.

Advertisement

ವಿಕಿಪೀಡಿಯಾ ಪುಟದಲ್ಲಿ ಅರ್ಶದೀಪ್ ಸಿಂಗ್ ಅವರನ್ನು “ಖಾಲಿಸ್ತಾನಿ ರಾಷ್ಟ್ರೀಯ ಕ್ರಿಕೆಟ್ ತಂಡ” ಕ್ಕೆ ಆಡಲು ಆಯ್ಕೆ ಮಾಡಲಾಗಿದೆ ಎಂದು ಬದಲಾವಣೆ ಮಾಡಲಾಗಿತ್ತು. ಸದ್ಯ ವಿಕಿಪೀಡಿಯಾ ಪುಟವನ್ನು ಸರಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next