Advertisement

ಪಾಕ್‌ ಜೈಲಿನಲ್ಲಿದ್ದಾರೆ 546 ಭಾರತೀಯ ಖೈದಿಗಳು

03:45 AM Jul 02, 2017 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಜೈಲುಗಳಲ್ಲಿ 500 ಮಂದಿ ಮೀನುಗಾರರು ಸೇರಿದಂತೆ ಒಟ್ಟು 546 ಮಂದಿ ಭಾರತೀಯರಿದ್ದಾರೆ ಎಂದು ಪಾಕ್‌ ಸರಕಾರ ನೀಡಿರುವ ಅಧಿಕೃತ ಮಾಹಿತಿ ತಿಳಿಸಿದೆ. ರಾಜತಾಂತ್ರಿಕ ಸಂಬಂಧಗಳ ಒಪ್ಪಂದದ ಪ್ರಕಾರ, ಎರಡೂ ದೇಶಗಳು ತಮ್ಮ ತಮ್ಮ ದೇಶದ ಜೈಲುಗಳಲ್ಲಿ ಇರುವ ಕೈದಿಗಳ ಪಟ್ಟಿಯನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ 1 ಮತ್ತು ಜುಲೈ 1ರಂದು ವಿನಿಮಯ ಮಾಡಿಕೊಳ್ಳುತ್ತವೆ. ಕಳೆದ ಜನವರಿಯಲ್ಲಿ ಪಾಕ್‌ ಸರಕಾರ 219 ಮೀನುಗಾರರನ್ನು ಬಿಡುಗಡೆ ಮಾಡಿತ್ತು. ಈ ತಿಂಗಳ 10ರಂದು 77 ಮೀನುಗಾರರು ಮತ್ತು ಒಬ್ಬ ನಾಗರಿಕನನ್ನು ಬಿಡುಗಡೆ ಮಾಡಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next