Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಬ್ಲಿಂಕೆನ್ ಸ್ಪಷ್ಟವಾಗಿ ಏನು ಮಾತುಕತೆ ನಡೆಯಿತು ಎಂಬ ಸುಳಿವು ನೀಡಿ ದ್ದಾರೆ. “ನಾವು ಉತ್ಪಾದನಾಶೀಲವಾದ, ಪ್ರಜಾ ಪ್ರಭುತ್ವದ ಹಾದಿಯಲ್ಲಿರುವ, ಸಮೃದ್ಧ ಪಾಕಿಸ್ಥಾನಕ್ಕೆ ಬೆಂಬಲ ನೀಡುತ್ತೇವೆ. ಪಾಕಿಸ್ಥಾನದ ಆರ್ಥಿಕ ಚೇತರಿಕೆ ನಮ್ಮ ಅಗ್ರ ಆದ್ಯತೆ. ಆ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ’ ಎಂದು ಬ್ಲಿಂಕೆನ್ ಹೇಳಿಕೊಂಡಿದ್ದಾರೆ.
ಒಂದು ಕಡೆ ಚೀನ, ಅಮೆರಿಕ, ಐಎಂಎಫ್ ಬಳಿ ಹಣ ಕೊಡಿ ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅಲೆಯುತ್ತಿದ್ದಾರೆ. ಇನ್ನೊಂದು ಕಡೆ ಪಾಕ್ ಸೇನಾಪಡೆಗಳ ಮುಖ್ಯಸ್ಥ ಸೈಯದ್ ಆಸಿಮ್ ಮುನೀರ್ ಮಾತನಾಡಿ ಪ್ರತೀ ಪಾಕಿ ಸ್ಥಾನಿಯರು ಭಿಕ್ಷಾಪಾತ್ರೆಯನ್ನು ಎಸೆಯಬೇಕು. ಸ್ವಾವಲಂಬಿಗಳಾಗಬೇಕು. ಪಾಕಿಸ್ಥಾನವು ಹೆಮ್ಮೆಯನ್ನು ಹೊಂದಿರುವ, ಪ್ರತಿಭಾವಂತರಿ ರುವ ದೇಶ ಎಂದು ವರ್ಣಿಸಿದ್ದಾರೆ. ಶೆಹಬಾಜ್ ನೆರವಿಗಾಗಿ ಅಂಗಾಲಾಚುತ್ತಿರುವ ನಡುವೆಯೇ ಮುನೀರ್ ನೀಡಿರುವ ಹೇಳಿಕೆ ಗಮನ ಸೆಳೆದಿದೆ.