ಹೊಸದಿಲ್ಲಿ : ಪಾಕಿಸ್ಥಾನ ಒಂದು ಛುಟ್‌ಪುಟಿಯಾ (ಸಣ್ಣ) ದೇಶ; ಅದರೊಂದಿಗೆ ಲಘು ಯುದ್ಧವನ್ನು ಮಾಡುವ ಅಗತ್ಯವೂ ಇಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಸಾದ್ ಹೇಳಿದ್ದಾರೆ.
“ಪಾಕಿಸ್ಥಾನ ಒಂದು ಪುಟಾಣಿ ದೇಶ; ಅದರೊಂದಿಗೆ ಲಘು ತೀವ್ರತೆಯ ಯುದ್ಧವನ್ನು ಕೂಡ ನಾನು ಪರಿಗಣಿಸುವುದಿಲ್ಲ’ ಎಂದು ಬಿಜೆಪಿ ಸಚಿವ ಪ್ರಧಾನ್ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮಾಧ್ಯಮ ಕಾರ್ಯಕ್ರಮದಲ್ಲಿ ಹೇಳಿದರು.
ಪಾಕಿಸ್ಥಾನ ಈಚೆಗೆ ಕೈಗೊಂಡ ತಥಾಕಥಿತ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಚಿವ ಪ್ರಧಾನ್ ಉತ್ತರಿಸುತ್ತಿದ್ದರು.
ಪ್ರಧಾನ್ ಮಾತು ಮುಂದುವರಿಸಿ ಹೀಗೆ ಹೇಳಿದರು : ನಾನು ಡೋಕ್ಲಾಂ ಬಿಕ್ಕಟ್ಟಿನಪರಾಕಾಷ್ಠೆಯಲ್ಲಿ ಒಮೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಜಂಗೀಪುರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದೆ. ಜಂಗೀಪುರದಲ್ಲಿ ಹೊಸ ಮಿಲಿಟರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಅಲ್ಲಿ ನಾನು ಈಸ್ಟರ್ನ್ ಕಮಾಂಡ್‌ನ ಮುಖ್ಯಸ್ಥರನ್ನು ಭೇಟಿಯಾದೆ. ಡೋಕ್ಲಾಂ ಬಗ್ಗೆ ಕಳವಳ ವ್ಯಕ್ತಪಡಿಸಿ ನಾನು ಕೇಳಿದೆ: ಏನಾದೀತು ? ನಾನು ಆ ಪ್ರಶ್ನೆಯನ್ನು ಓರ್ವ ನಾಗರಿಕನಾಗಿ ಕೇಳಿದೆ; ಸಚಿವನಾಗಿ ಅಲ್ಲ. ಅದಕ್ಕೆ ಅವರ ಉತ್ತರ ಹೀಗಿತ್ತು : ಚೀನವೇ ಇರಲಿ ಪಾಕಿಸ್ಥಾನವೇ ಇರಲಿ; ಅಥವಾ ನಮ್ಮ ಯಾವುದೇ ನೆರೆಕರೆಯ ದೇಶವಿರಲಿ; ನಮ್ಮ ಮಿಲಿಟರಿ ಶಕ್ತಿ ಸಾಮರ್ಥ್ಯ ಇಂದು ಯಾರಿಗೂ ಊಹನಾತೀತ; ಆದುದರಿಂದ ಈ ರೀತಿಯ ಸಣ್ಣ ಮಟ್ಟದ, ಲಘು ತೀವ್ರತೆಯ ಯುದ್ಧ ಒಂದು ಲೆಕ್ಕವೇ ಅಲ್ಲ; ಆದರೆ ಯಾರಾದರೂ (ಪಾಕಿಸ್ಥಾನ) ನಮ್ಮ ವಿರುದ್ಧ ದುರ್ನಡತೆ ತೋರಿದರೆ ನಾವು ಅದಕ್ಕೆ ಉತ್ತರ ನೀಡಲೇಬೇಕಾಗುತ್ತದೆ’.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿರುವ ಪ್ರಧಾನ್ ಅವರು ಭಾರತ ಮತ್ತು ಯುಎಇ ಹಾಗೂ ಸೌದಿ ಅರೇಬಿಯ ಜತೆಗಿನ ಬಾಂಧವ್ಯದ ಬಗ್ಗೆಯೂ ಮಾತನಾಡಿದರು.