Advertisement

ಪಾಕ್ ವಂಚಕ ದೇಶ, ಭಾರತದ ಬಾಯಿ ಮಾತು ಬೆದರಿಕೆ ಸಾಕಾಗಲ್ಲ: ಶಿವಸೇನಾ

06:37 PM Dec 27, 2017 | Team Udayavani |

ಮುಂಬೈ:ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ತಾಯಿ ಹಾಗೂ ಪತ್ನಿಗೆ ಅವಕಾಶ ನೀಡಿದ್ದ ವೇಳೆಯಲ್ಲಿ ಪಾಕ್ ಅಮಾನವೀಯವಾಗಿ ನಡೆಸಿಕೊಂಡ ರೀತಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನೆರೆದೇಶದ ಎರಡು ನಾಲಗೆ ಮತ್ತೆ ಬಯಲಾಗಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬುಧವಾರ ಕಿಡಿಕಾರಿದೆ.

Advertisement

ಶಿವಸೇನಾದ ಮುಖವಾಣಿ ಮಹಾರಾಷ್ಟ್ರ ಮೂಲದ ಸಾಮ್ನಾದ ಲೇಖನದಲ್ಲಿ ಕಟುವಾದ ಶಬ್ಧಗಳಲ್ಲಿ ಖಂಡಿಸಿದೆ. ಪಾಕಿಸ್ತಾನದ ತಿದ್ದಲಾಗದ ಬುದ್ಧಿಯಿಂದಾಗಿ ನಮ್ಮ ದೇಶಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಆದರೂ ತೊಂದರೆ ಇಲ್ಲ, ನಾವು ಹೇಗೆ ಇಲ್ಲಿಂದ ಅವರಿಗೆ ಗೌರವಯುತ ತಿರುಗೇಟು ನೀಡಲು ಸಾಧ್ಯ. ಪಾಕ್ ಯಾವತ್ತೂ ಭಾರತವನ್ನು ದ್ವೇಷಿಸುತ್ತಲೇ ಬಂದಿದೆ.

ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಪತ್ನಿ ಮತ್ತು ತಾಯಿ ತೆರಳಿದಾಗ ಪಾಕ್ ನಿಜ ಮುಖ ಬಹಿರಂಗವಾಗಿದೆ. ಒಬ್ಬರನ್ನೊಬ್ಬರು ಆಲಿಂಗಿಸಲು ಸಾಧ್ಯವಾಗದಿರುವಂತೆ ಗ್ಲಾಸ್ ಪರದೆಯನ್ನು ಹಾಕಿ ಮಾತುಕತೆಗೆ ವ್ಯವಸ್ಥೆ ಮಾಡಿತ್ತು ಎಂದು ಲೇಖನದಲ್ಲಿ ತಿಳಿಸಿದೆ.

ಕುಲಭೂಷಣ್ ಜಾಧವ್ ವಿಷಯದಲ್ಲಿ ಭಾರತ ಕಠಿಣ ಎಚ್ಚರಿಕೆಯನ್ನು ನೀಡಬೇಕಾಗಿದೆ. ಪಾಕಿಸ್ತಾನಕ್ಕೆ ಕೇವಲ ಬಾಯಿ ಮಾತಾಗಲಿ ಅಥವಾ ಕಾಗದದ ಬೆದರಿಕೆಗಳೆಲ್ಲಾ ಕೆಲಸಕ್ಕೆ ಬರುವುದಿಲ್ಲ. ಪಾಕ್ ನೆಲದಲ್ಲಿಯೇ ಕಠಿಣ ಸಂದೇಶವನ್ನು ನೀಡುವ ಮೂಲಕ ಪಾಠ ಕಲಿಸಬೇಕಾಗಿದೆ ಎಂದು ಲೇಖನದಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next