Advertisement

ಭಾರತದ ರಫೇಲ್‌ಗೆ ಪಾಕ್‌ ಸವಾಲು; ವಾಯುಪಡೆಗೆ ಚೀನದ ಜೆ-10 ವಿಮಾನ ಸೇರಿಸಿಕೊಂಡ ಪಾಕಿಸ್ತಾನ

01:35 PM Mar 14, 2022 | Team Udayavani |

ಇಸ್ಲಾಮಾಬಾದ್‌: ಭಾರತದ ವಿರುದ್ಧ ಕಿಡಿಗೇಡಿತನ ಮಾಡುವುದೆಂದರೆ, ಪಾಕಿಸ್ತಾನಕ್ಕೆ ಎಲ್ಲಿಲ್ಲದ ಖುಷಿ. ಭಾರತ ರಕ್ಷಣೆಗಾಗಿ ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿಸಿದ್ದರೆ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ರಫೇಲ್‌ಗೆ ಸಮನಾಗಿರುವ ಅಂಶಗಳನ್ನು ಒಳಗೊಂಡಿರುವ “ಜೆ-10ಸಿ’ ಬಹುಪಯೋಗಿ ಯುದ್ಧ ವಿಮಾನಗಳನ್ನು ಚೀನದಿಂದ ಖರೀದಿಸಿ, ಸೇನೆಗೆ ಸೇರ್ಪಡೆ ಮಾಡಿಕೊಂಡಿದೆ.

Advertisement

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಮಿನ್ಹಾಸ್‌ ಕಮ್ರಾದಲ್ಲಿರುವ ವಾಯುನೆಲೆಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ “ಮುಂದಿನ ದಿನಗಳಲ್ಲಿ ಯಾವುದೇ ರಾಷ್ಟ್ರ ಪಾಕಿಸ್ತಾನ ಗುರಿಯಾಗಿಸಿಕೊಂಡು ದಾಳಿ ನಡೆಸುವುದಿದ್ದರೆ ಕೊಂಚ ಯೋಚಿಸಬೇಕು’ ಎಂದು ಭಾರತ ಹೆಸರು ಪ್ರಸ್ತಾಪಿಸದೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಮಧ್ಯಪ್ರದೇಶ: ನಾಲ್ವರು ನಿಷೇಧಿತ ಜೆಎಂಬಿ ಉಗ್ರರ ಬಂಧನ

ಪಾಕಿಸ್ತಾನ ವಾಯುಪಡೆ (ಪಿಎಎಫ್) 40 ವರ್ಷಗಳಿಂದ ಹೊಂದಿರುವ “ಎಫ್-16′ ಜಾಗದಲ್ಲಿ ಹೊಸ ವಿಮಾನಗಳು ಸೇರ್ಪಡೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next