Advertisement
ಪಾಕಿಸ್ತಾನ ಯಾವಾಗೆಲ್ಲಾ ದುಸ್ಸಾಹಸ ನಡೆಸಿತ್ತೋ ಆವಾಗ ಸೋಲನ್ನೇ ಅನುಭವಿಸಿದೆ. ಆದರೂ ಕೂಡಾ ಪಾಕ್ ಇತಿಹಾಸದಿಂದ ಪಾಠ ಕಲಿತಿಲ್ಲ ಎಂದು ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ(Kargil War Memorial) ಪ್ರಧಾನಿ ಮೋದಿ ಹೇಳಿದರು.
Related Articles
Advertisement
ಕಾರ್ಗಿಲ್ ಯುದ್ಧದಲ್ಲಿ ಪಾಕ್ ವಿರುದ್ಧ ಜಯ ಸಾಧಿಸಿರುವ ದಿನವನ್ನು ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತಿದೆ.
ಬಂಡೆ ಸ್ಫೋಟಿಸುವ ಮೂಲಕ ಹಿಮಾಚಲ ಪ್ರದೇಶ ಹಾಗೂ ಲಡಾಖ್ ನಡುವೆ ಎಲ್ಲ ಋತುವಿನಲ್ಲೂ ಸಂಪರ್ಕ ಕಲ್ಪಿಸುವ ಸುರಂಗಕ್ಕೆ ಮೋದಿ ಚಾಲನೆ ನೀಡಿದ್ದಾರೆ. ಲಡಾಖ್‌ನ ದ್ರಾಸ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಇಲ್ಲಿಂದಲೇ ವರ್ಚುವಲ್ ಆಗಿ ಶಿನ್ ಕುನ್ ಲಾ ಸುರಂಗ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಸುರಂಗ 4.1 ಕಿ.ಮೀ ಉದ್ದವಿರಲಿದ್ದು, ನಿಮು ಪಡುಂ ದರ್ಚಾ ಹೆದ್ದಾರಿಯಲ್ಲಿ 15,800 ಅಡಿ ಎತ್ತರದಲ್ಲಿ ನಿರ್ಮಾಣವಾಗಲಿದೆ. ನಿರ್ಮಾಣದ ಬಳಿಕ ವಿಶ್ವದ ಅತೀ ಎತ್ತರದ ಸುರಂಗ ಎನಿಸಲಿದೆ. ಪ್ರಸ್ತುತ ಚೀನದ ಮಿ ಲಾ ಸುರಂಗವು 15,590 ಅಡಿ ಎತ್ತರ ಹೊಂದಿದ್ದು ವಿಶ್ವದ ಎತ್ತರದ ಸುರಂಗ ಎನಿಸಿಕೊಂಡಿದೆ. ಟ್ವಿನ್-ಟ್ಯೂಬ್ ದ್ವಿಪಥ ಸುರಂಗವಾಗಿರುವ ಶಿನ್ ಕುನ್ ಲಾದ ಮೇಲೆ ಫಿರಂಗಿ ಮತ್ತು ಕ್ಷಿಪಣಿ ದಾಳಿಯಾದರೂ ಯಾವುದೇ ಹಾನಿ ಆಗದು ಎಂಬುದು ವಿಶೇಷ.