Advertisement

ಚೀನಾ ಯುದ್ಧ ಬಳಿಕ‌ ಕಾಶ್ಮೀರ ವಶಕ್ಕೆ ಯತ್ನಿಸಿದ್ದ ಪಾಕಿಸ್ತಾನ

06:35 AM Dec 17, 2018 | |

ಹೊಸದಿಲ್ಲಿ:1962ರಲ್ಲಿ ಚೀನಾ ವಿರುದ್ಧದ ಯುದ್ಧದಲ್ಲಿ ಭಾರತದ ಸೋಲು ಹಾಗೂ 1965ರಲ್ಲಿ ಕಛ… ಗಡಿಯ ಒಪ್ಪಂದದ ನಂತರ ಕಾಶ್ಮೀರವನ್ನು ಆಕ್ರಮಿಸಲು ಪಾಕ್‌ ಯತ್ನಿಸಿತ್ತು ಎಂಬ ಸ್ಫೋಟಕ ಮಾಹಿತಿ ನಿವೃತ್ತ ಲೆ.ಜ ಎನ್‌ ಎಸ್‌ ಬ್ರಾರ್‌ ರಚಿಸಿದ ಡ್ರಮ್ಮರ್ಸ್‌ ಕಾಲ್‌ ಎಂಬ ಕೃತಿಯಲ್ಲಿ ಬಹಿರಂಗಗೊಂಡಿದೆ.

Advertisement

ಭಾರತ ಮತ್ತು ಪಾಕಿಸ್ತಾನದ ಮಧ್ಯೆ 1965ರಲ್ಲಿ ನಡೆದ ಯುದ್ಧದ ನಿಜವಾದ ಉದ್ದೇಶ ಇದಾಗಿತ್ತು. ಈ ಯುದ್ಧದಲ್ಲಿ ಪಾಕಿಸ್ತಾನ 97 ಟ್ಯಾಂಕ್‌ಗಳನ್ನು ಕಳೆದುಕೊಂಡಿತ್ತು. ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್ ಕೂಡ ಈ ಯುದ್ಧದಲ್ಲಿ ಕಮಾಂಡಿಂಗ್‌ ಅಧಿಕಾರಿಯಾಗಿ ಭಾಗವಹಿಸಿದ್ದರು. 

ಗಡಿಯಿಂದ 5 ಕಿ.ಮೀ ದೂರದಲ್ಲಿರುವ ಖೇಮ್‌ ಕರಣ್‌ ಎಂಬ ಪಟ್ಟಣಕ್ಕೆ ಸೆ.8 ರಂದು ಕಾಶ್ಮೀರ ಸೇನೆ ನುಗ್ಗಿತ್ತು ಎಂದು ಬ್ರಾರ್‌ ಹೇಳಿದ್ದಾರೆ. ಭಾರತದ ಸೇನೆ ತೀವ್ರ ಪ್ರತಿದಾಳಿ ನಡೆಸಿ ಎರಡೇ ದಿನದಲ್ಲಿ ಪಾಕ್‌ ಸೇನೆಯನ್ನು ಹೊಡೆದುರುಳಿಸಿತ್ತು. ಈ ಇಡೀ ಪ್ರಾಂತ್ಯವೇ ಪಾಕ್‌ ಯೋಧರ ಸ್ಮಶಾನದಂತಾಗಿತ್ತು ಎಂದು ಬ್ರಾರ್‌ ಹೇಳಿದ್ದಾರೆ. ಪ್ರಮುಖ ಅಧಿಕಾರಿಗಳು ಹಾಗೂ 11 ಸಕ್ರಿಯ ಟ್ಯಾಂಕ್‌ಗಳು ಶಸ್ತ್ರ ತ್ಯಾಗ ಮಾಡಿದ್ದವು ಎಂದು ಅವರು ಕೃತಿಯಲ್ಲಿ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next