Advertisement

ನೌಕರರಿಗೆ ವೇತನ ನೀಡಲೂ ಪಾಕಿಸ್ಥಾನ ಬಳಿ ಹಣವಿಲ್ಲ!

12:18 AM Feb 26, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರಕಾರಿ ಉದ್ಯೋಗಿಗಳಿಗೆ ವೇತನ ನೀಡಲು ಸಹ ಹಣವಿಲ್ಲದಂತಾಗಿದೆ. ಸರಕಾರಿ ನೌಕರರ ವೇತನ ಸೇರಿದಂತೆ ಎಲ್ಲ ಬಿಲ್‌ಗ‌ಳನ್ನು ತಡೆಹಿಡಿಯುವಂತೆ ಪ್ರಧಾನ ಲೆಕ್ಕಾಧಿಕಾರಿಗಳಿಗೆ ಪಾಕ್‌ ಸರಕಾರ ಸೂಚಿಸಿದೆ.

Advertisement

ಇನ್ನೊಂದೆಡೆ ಮುಂದಿನ ಆದೇಶದವರೆಗೆ ಸಚಿವಾಲಯಗಳು, ಇಲಾಖೆ ಗಳು ಸಹಿತ ಎಲ್ಲ ವಿಭಾಗಗಳ ಬಿಲ್‌ಗ‌ಳನ್ನು ಅನು ಮೋದಿಸದಂತೆ ಪಾಕಿಸ್ಥಾನ ಕಂದಾಯ ಇಲಾಖೆಯ ಪ್ರಧಾನ ಲೆಕ್ಕಾಧಿಕಾರಿಗಳಿಗೆ ಪಾಕ್‌ ಹಣಕಾಸು ಮತ್ತು ಕಂದಾಯ ಸಚಿವಾಲಯ ಸೂಚನೆ ನೀಡಿದೆ.

ಕೆಲವು ವಾರಗಳ ಹಿಂದೆ ಪಾಕಿಸ್ಥಾನದ ವಿದೇಶಿ ವಿನಿಮಯ ಮೀಸಲು 2.9 ಬಿಲಿಯನ್‌ ಡಾಲರ್‌ಗೆ ಕುಸಿದಿತ್ತು. ಪ್ರಸ್ತುತ ಅದು 4 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಆಪ್ತ ರಾಷ್ಟ್ರಗಳು ಹಾಗೂ ಐಎಂಎಫ್ ನೆರವಿನ ನಿರೀಕ್ಷೆಯಲ್ಲಿ ಪಾಕ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next