Advertisement

“ಪಾಕ್‌ ಬಳಿ ಅಣು ಬಾಂಬ್‌ ಇರುವುದು ಮರೆಯದಿರಿ’; ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್‌ ಸಚಿವೆ

09:03 PM Dec 18, 2022 | Team Udayavani |

ಇಸ್ಲಾಮಾಬಾದ್‌: “ಪಾಕಿಸ್ತಾನದ ಬಳಿ ಅಣು ಬಾಂಬ್‌ ಇರುವುದನ್ನು ಭಾರತ ಮರೆಯಬಾರದು,’ ಎಂದು ಪಾಕ್‌ ಸಚಿವೆ ಶಾಜಿಯಾ ಮರ್ರಿ ಬೆದರಿಕೆ ಹಾಕಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಅವರ ಅವಹೇಳನಕಾರಿ ಹೇಳಿಕೆ ಸಮರ್ಥಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮಗೆ ಪರಮಾಣು ಮಾನ್ಯತೆ ಇರುವುದು ಮೌನವಾಗಿ ಇರುವುದಕ್ಕೆ ಅಲ್ಲ. ಅಗತ್ಯ ಸಂದರ್ಭದಲ್ಲಿ ಅದನ್ನು ಬಳಸಲು ನಾವು ಹಿಂದಡಿ ಹಾಕುವುದಿಲ್ಲ,’ ಎಂದಿದ್ದಾರೆ.

“ಮೋದಿ ಸರ್ಕಾರ ಯುದ್ಧ ಆರಂಭಿಸಿದರೆ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಸುಮ್ಮನಿರಲು ನಮಗೆ ಪರಮಾಣು ಮಾನ್ಯತೆ ನೀಡಿಲ್ಲ. ಹೇಗೆ ಉತ್ತರ ನೀಡಬೇಕೆಂಬುದು ಪಾಕಿಸ್ತಾನಕ್ಕೆ ತಿಳಿದಿದೆ. ನೀವು ಪದೇ ಪದೆ ಪಾಕಿಸ್ತಾನದ ವಿರುದ್ಧ ಅಪಾದನೆಗಳನ್ನು ಮಾಡಿದರೆ, ಪಾಕಿಸ್ತಾನ ಕೇಳುತ್ತಾ ಸುಮ್ಮನೆ ಕೂಡುವುದಿಲ್ಲ,’ ಎಂದು ಕಿಡಿಕಾರಿದ್ದಾರೆ.

ಆದರೆ ಇವರ ಎಚ್ಚರಿಕೆಯ ಹೇಳಿಕೆಯ ವಿರುದ್ಧ ಜಗತ್ತಿನಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮೆತ್ತಗಾಗಿರುವ ಅವರು, “ಪಾಕಿಸ್ತಾನ ಒಂದು ಜವಾಬ್ದಾರಿ ಇರುವ ಪರಮಾಣು ದೇಶವಾಗಿದೆ. ಭಯೋತ್ಪಾದನೆ ವಿರುದ್ಧ ಭಾರತಕ್ಕಿಂತ ಹೆಚ್ಚು ಪಾಕ್‌ ಹೋರಾಟ ನಡೆಸಿದೆ,’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next