Advertisement

ಪಾಕ್‌ ಅಧಿಕೃತ ವೆಬ್‌ಗೆ ಭಾರತದ ಹ್ಯಾಕರ್‌ಗಳ ಕನ್ನ 

08:50 AM Aug 04, 2017 | Karthik A |

ಇಸ್ಲಾಮಾಬಾದ್‌: ಪಾಕಿಸ್ಥಾನ ಸರಕಾರದ ಅಧಿಕೃತ ವೆಬ್‌ಸೈಟ್‌ ಅನ್ನು ಭಾರತದ ಹ್ಯಾಕರ್‌ಗಳು ಹ್ಯಾಕ್‌ ಮಾಡಿದ್ದಾರೆ. ಅಲ್ಲಿ ಪಾಕ್‌ ಸರಕಾರದ ಅಧಿಕೃತ ಮಾಹಿತಿಗಳ ಬದಲು ಭಾರತದ ಸ್ವಾತಂತ್ರ್ಯೋತ್ಸವ ಶುಭಾಶಯಗಳನ್ನು ಮತ್ತು ರಾಷ್ಟ್ರಗೀತೆಯನ್ನು ಪೋಸ್ಟ್‌ ಮಾಡಲಾಗಿದೆ. ಗುರುವಾರ ಅಪರಾಹ್ನ 3 ಗಂಟೆಗೆ ವೆಬ್‌ಸೈಟ್‌ ಹ್ಯಾಕ್‌ ಮಾಡಲಾಗಿದ್ದು, 4 ಗಂಟೆ ಹೊತ್ತಿಗೆ ಪಾಕ್‌ ಅದನ್ನು ಮರುಸ್ಥಾಪನೆ ಮಾಡಿದೆ. ವೆಬ್‌ಸೈಟನ್ನು Ne0-h4ck3r  ಎಂಬ ಹ್ಯಾಕರ್‌ಗಳ ತಂಡ ಹ್ಯಾಕ್‌ ಮಾಡಿದ್ದಾಗಿ ಹೇಳಿಕೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next