Advertisement

Pakistan ಸರ್ಕಾರಿ ವಿಮಾನ ಕಂಪನಿಗಳು ಖಾಸಗಿಗೆ: ಪಿಎಂ ಶೆಹಬಾಜ್‌ ಷರೀಫ್

09:51 PM May 14, 2024 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ತೀರ್ಮಾನಿಸಿದೆ.

Advertisement

ಈ ಬಗ್ಗೆ ಖುದ್ದು ಪ್ರಧಾನಿ ಶೆಹಬಾಜ್‌ ಷರೀಫ್ ಅವರೇ ಘೋಷಣೆ ಮಾಡಿದ್ದಾರೆ. ಆದರೆ, ಸರ್ಕಾರಕ್ಕೆ ಸಂಬಂಧಿಸಿದ ಅತ್ಯಂತ ಜರೂರು ಸೇವೆಗಳನ್ನು ಒದಗಿಸುವ ವಿಭಾಗಗಳನ್ನು ತನ್ನಲ್ಲೇ ಇರಿಸಿಕೊಳ್ಳಲು ತೀರ್ಮಾನಿಸಿದೆ.

ವಿಮಾನಯಾನ ಕಂಪನಿಗಳನ್ನು ಖಾಸಗಿ ಕಂಪನಿಗಳಿಗೆ ವಹಿಸಿಕೊಳ್ಳುವುದರಿಂದ ಜನರು ಸರ್ಕಾರಕ್ಕೆ ಪಾವತಿ ಮಾಡಿದ ತೆರಿಗೆ ಹಣ ಉಳಿತಾಯವಾಗಲಿದೆ ಎಂದು ಪಾಕಿಸ್ತಾನ ಪ್ರಧಾನಿಯವರ ಸಮಜಾಯಿಷಿಯಾಗಿದೆ. ವ್ಯಾಪಾರ ಮಾಡುವುದು ಸರ್ಕಾರದ ಕೆಲಸವಲ್ಲ. ಆದರೆ, ಅದಕ್ಕೆ ಬೇಕಾಗಿರುವ ಸೂಕ್ತ ವಾತಾವರಣವನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next