ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಉದ್ಯೋಗಿಗಳ ಕೆಲಸದ ದಿನವನ್ನು ಕಡಿಮೆ ಮಾಡುವ ಚಿಂತನೆಯಲ್ಲಿದೆ.
ಇಂಧನ ಬಳಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಚಿಂತನೆ ನಡೆಸಲಾಗುತ್ತಿದೆ. ವಾರದಲ್ಲಿ ಒಂದು ಕೆಲಸದ ದಿನವನ್ನು ಕಡಿಮೆ ಮಾಡುವುದರಿಂದ ವಾರ್ಷಿಕವಾಗಿ 16,000 ಕೋಟಿ ರೂ.ಗೂ ಹೆಚ್ಚಿನ ವಿದೇಶಿ ವಿನಿಮಯ ಉಳಿತಾಯವಾಗಲಿದೆ ಎನ್ನಲಾಗಿದೆ.
ದೇಶವು 2021ರ ಜುಲೈನಿಂದ 2022ರ ಏಪ್ರಿಲ್‌ವರೆಗೆ ಒಟ್ಟು 1.31 ಲಕ್ಷ ಕೋಟಿ ರೂ. ಮೌಲ್ಯದ ಇಂಧನ ಆಮದು ಮಾಡಿಕೊಂಡಿದೆ.
ಇದನ್ನೂ ಓದಿ:ವಾಡಿ: ವಾರದಲ್ಲಿ ಪಹಣಿ ದೋಷ ಸರಿಪಡಿಸುವ ಡಿಸಿ ಭರವಸೆ ತಿಂಗಳು ದಾಟಿದರೂ ಈಡೇರಲಿಲ್ಲ
65,000 ಕೋಟಿ ರೂ. ಬೆಲೆಯ ಪೆಟ್ರೋಲಿಯಂ ಆಮದು ಮಾಡಲಾಗಿದ್ದು, ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.121 ಹೆಚ್ಚಾಗಿದೆ.