Advertisement

ಪಾಕ್‌ಗೆ ಬಂತು ಸೌದಿಯ 2ನೇ ಕಂತಿನ ನೆರವು

09:05 AM Dec 15, 2018 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ಥಾನಕ್ಕೆ ಶುಕ್ರವಾರ ಸೌದಿ ಅರೇಬಿಯಾದಿಂದ 71,970 ಕೋಟಿ ರೂ. ಮೊತ್ತದ ನೆರವು ಪ್ರಕಟಿಸಲಾಗಿದೆ. ಇದು ಪಾಕ್‌ಗೆ ನೀಡಲಾದ ಎರಡನೇ ಹಂತದ ನೆರವು ಎಂದು ‘ದ ಡಾನ್‌’ ಪತ್ರಿಕೆ ವರದಿ ತಿಳಿಸಿದೆ. ಅಮೆರಿಕದ ಡಾಲರ್‌ ಎದುರು ಕುಸಿದಿರುವ ಪಾಕ್‌ನ ಅರ್ಥ ವ್ಯವಸ್ಥೆಯನ್ನು ಚೇತರಿಸುವಂತೆ ಮಾಡಲು ಸೌದಿಯ ಈ ನೆರವು ಸಹಾಯಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next