Advertisement

ಹಾಕಿ ವಿಶ್ವಕಪ್‌: ಭಾರತಕ್ಕೆ ಪಾಕ್‌ ಆಗಮಿಸಲು ಕೇಂದ್ರ ಒಪ್ಪಿಗೆ ?

01:04 PM Dec 08, 2017 | Team Udayavani |

ಭುವನೇಶ್ವರ: ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ಗೆ ಪಾಕಿಸ್ಥಾನ ತಂಡ ಆಗಮಿಸುತ್ತೋ? ಇಲ್ಲವೋ? ಅನ್ನುವ ವಿಷಯ ಅನುಮಾನದಲ್ಲಿತ್ತು. ಆದರೆ ಇದೀಗ ಭಾರತ ಸರಕಾರ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಹಾಕಿ ಇಂಡಿಯಾ ಸಿಇಒ ಎಲೆನಾ ನಾರ್ಮನ್‌, ನಾವು ಕೂಟಕ್ಕೆ ಪಾಕಿಸ್ಥಾನ ತಂಡವನ್ನು ಆಹ್ವಾನಿಸುತ್ತಿದ್ದೇವೆ. ಪಾಕ್‌ ತಂಡದ ಆಗಮನಕ್ಕೆ ಈಗಾಗಲೇ ಇಬ್ಬರು ಕೇಂದ್ರ ಸಚಿವರ ಜತೆ ಮಾತುಕತೆ ಮಾಡಿದ್ದೇವೆ. ಅವರಿಂದ ಒಪ್ಪಿಗೆ ಸಿಕ್ಕಿದೆ ಎಂದಿದ್ದಾರೆ.

ಕೂಟದಲ್ಲಿ 16 ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಈಗಾಗಲೇ ಯುವಜನ ಮತ್ತು ಕ್ರೀಡಾ ಇಲಾಖೆ, ಗೃಹ ಮತ್ತು ರಕ್ಷಣಾ ಇಲಾಖೆಗೆ ಪತ್ರ ಬರೆಯಲಾಗಿದೆ. ಎರಡು ತಂಡಗಳಿಗೆ ಒಪ್ಪಿಗೆ ಸಿಕ್ಕಿದೆ. 

ಮುಂದಿನ ವರ್ಷ ನವೆಂಬರ್‌ 18 ರಿಂದ ಡಿಸೆಂಬರ್‌ 16ರ ಭುವನೇಶ್ವರದಲ್ಲಿ ಹಾಕಿ ವಿಶ್ವಕಪ್‌ ನಡೆಯಲಿದೆ. ಭಾರತ ಸೇರಿದಂತೆ 16 ತಂಡಗಳು ಪಾಲ್ಗೊಳ್ಳಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next