Advertisement

ನಿಲ್ಲದ ಪಾಕ್‌ ಹಸಿ ಸುಳ್ಳು

11:47 PM Sep 22, 2021 | Team Udayavani |

ಹೊಸದಿಲ್ಲಿ/ಶ್ರೀನಗರ: ಭಾರತದ ವರ್ಚಸ್ಸಿಗೆ ಧಕ್ಕೆ ತರುವ ಯಾವುದೇ ಅವಕಾಶವನ್ನು ಪಾಕಿಸ್ಥಾನ‌ ಬಿಡುವುದಿಲ್ಲ. ಆದರೆ ಆ ರೀತಿ ನಡೆದುಕೊಳ್ಳಲು ಹೋಗಿ ಮುಖಭಂಗಕ್ಕೆ ಒಳಗಾಗುವುದು ಸಾಮಾನ್ಯ. ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರು ಅಸಂಖ್ಯಾತ ಜನರನ್ನು ಕೊಂದಿದ್ದಾರೆ ಎಂದು ಆರೋಪಿಸಿದೆ.

Advertisement

ಜತೆಗೆ ಅರೆಸುಟ್ಟ ದೇಹಗಳ ಫೋಟೋಗಳನ್ನು ಅಂತಾ ರಾಷ್ಟ್ರೀಯ ಸಮುದಾಯಕ್ಕೆ ನೀಡಿದೆ. ಒಟ್ಟು 153 ಪುಟಗಳ ವರದಿಯಲ್ಲಿ ಈ ಸುಳ್ಳಿನ ಸರಮಾಲೆಯನ್ನು ಪೋಣಿಸಿದೆ.

2017 ಜು.4ರಂದು ಪುಲ್ವಾಮಾದಲ್ಲಿ ದೇಶದ ಯೋಧರು  ವ್ಯಕ್ತಿಯೊಬ್ಬನನ್ನು ಕೊಂದಿದ್ದಾರೆ ಎಂದು  ಆ ವರದಿಯಲ್ಲಿ ಆರೋಪಿಸಲಾಗಿದೆ. ಭಾರತದ ಯೋಧರು ಪುಲ್ವಾಮಾದ ಬಹಮನೂ ಎಂಬ ಪ್ರದೇಶ ದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ ಎಂಬ ವ್ಯರ್ಥಾರೋಪವನ್ನೂ ಮಾಡಿದೆ ನೆರೆಯ ರಾಷ್ಟ್ರ. ಅದನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ಎರಡು ಗುರುತು ಸಿಗದ ಫೋಟೋಗಳನ್ನೂ ಪಾಕಿಸ್ಥಾನ‌ ಸರಕಾರ ಬಿಡು ಗಡೆ ಮಾಡಿದೆ. “ಅದು ಜಹಾಂಗಿರ್‌ ಖಂಡಿ ಮತ್ತು ಕಿಫಾಯತ್‌ ಅಹ್ಮದ್‌ ಎಂಬವರ ಸುಟ್ಟು ಹೋದ ಮೃತದೇಹ’ ಎಂಬ ಶೀರ್ಷಿಕೆಯನ್ನೂ ಕೊಡಲಾಗಿದೆ.

ತಮಾಷೆಯೆಂದರೆ, ಅದೇ ಫೋಟೋಗಳು ಹಿಂದಿನ ಹಲವು ಸಂದರ್ಭಗಳಲ್ಲಿ ಇಂಟರ್‌ನೆಟ್‌ನಲ್ಲಿ ಲಭ್ಯವಾಗಿದ್ದವು. ಟರ್ಕಿಯ ಕುದ್‌ì ನಾಗರಿಕರ ಮೇಲೆ ನಡೆದ ದಾಳಿಯ ಮಾದರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ಮೇಲೆ ಭಾರತದ ಯೋಧರು ದಾಳಿ ನಡೆಸುತ್ತಿದ್ದಾರೆ ಎಂದು 2011ರಲ್ಲಿಯೂ ಪಾಕ್‌ ಸರಕಾರ ಆರೋಪಿಸಿತ್ತು. ಅದೇ ಸಂದರ್ಭದಲ್ಲಿಯೂ ಇದೇ ಫೋಟೋಗಳನ್ನು ಬಳಕೆ ಮಾಡಲಾಗಿತ್ತು. 2009ರಲ್ಲಿ ಗಾಜಾ ಪಟ್ಟಿಯಲ್ಲಿ ಅಸುನೀಗಿದವರ ಫೋಟೋಗಳನ್ನು ಮುಂದಿಟ್ಟುಕೊಂಡು ಭಾರತ ಸರಕಾರದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಯಿ ಲೆಬ್ಬಿಸುವ ಪ್ರಯತ್ನವನ್ನೂ ಪಾಕಿಸ್ಥಾನ‌ ನಡೆಸಿತ್ತು.

ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಬಹಮನೂ ಎಂಬಲ್ಲಿ ನಡೆಸಿದ ಜನರ ಹತ್ಯೆಯ ಬಗ್ಗೆ ಪಾಕಿಸ್ಥಾನ‌ ಸರಕಾರ ಮೌನವಾಗಿ ಉಳಿದ್ದದ್ದು ಮಾತ್ರವಲ್ಲದೆ ಅದು ಬಿಡುಗಡೆ ಮಾಡಿರುವ ವರದಿಯಲ್ಲೂ ಉಲ್ಲೇಖವೇ ಇಲ್ಲ.

Advertisement

ಉಗ್ರ ಸಂಪರ್ಕ: ಮತ್ತೆ ಆರು ಮಂದಿ ವಜಾ:

ಉಗ್ರರ ಜತೆಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಆರು ಮಂದಿ ಸರಕಾರಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.  ಈ ಶಿಕ್ಷೆಗೆ ಗುರಿಯಾದವರಲ್ಲಿ ಇಬ್ಬರು ಪೊಲೀಸರೂ ಸೇರಿದ್ದಾರೆ. ಹೀಗಾಗಿ, ಆರು ತಿಂಗಳ ಅವಧಿಯಲ್ಲಿ ಉಗ್ರರ ಜತೆಗೆ ಲಿಂಕ್‌ ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಜಾಗೊಂಡ ಸರಕಾರಿ ನೌಕರರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಜು.11ರಂದು ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸಯ್ಯದ್‌ ಸಲಾವುದ್ದೀನ್‌ನ ಇಬ್ಬರು ಪುತ್ರರು ಸೇರಿದಂತೆ 11 ಮಂದಿ ಸರಕಾರಿ ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು. ಎಪ್ರಿಲ್‌-ಮೇನಲ್ಲಿ ಡಿಎಸ್‌ಪಿ ದವೀಂದರ್‌ ಸಿಂಗ್‌ ಸೇರಿದಂತೆ ಏಳು ಮಂದಿಗೆ ಗೇಟ್‌ಪಾಸ್‌ ನೀಡಲಾಗಿತ್ತು.

ಬಾಂಬ್‌ ನಿಷ್ಕ್ರಿಯ:

ಜಮ್ಮು ಮತ್ತು ಕಾಶ್ಮೀರದ ಪೂಂಛ್  ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ಯಲ್ಲಿ ನಾಲ್ಕು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿ ಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನಿಂದ 10,500 ರೂ. ನಗದು ಮೊತ್ತ ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಬಾರಾಮುಲ್ಲಾ ಜಿಲ್ಲೆಯಲ್ಲಿ ಯೋಧರೊ ಬ್ಬರು ಗುಂಡು ಹಾರಿಸಿದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡಿದ್ದಾನೆ ಮತ್ತು ಅವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next