Advertisement

ಭಾರತಕ್ಕೆ ಇಮ್ರಾನ್‌ ಖಾನ್‌ ಗೂಗ್ಲಿ : ಪಾಕ್‌ ವಿದೇಶ ಸಚಿವ ಕುರೇಶಿ

12:01 PM Nov 30, 2018 | Team Udayavani |

ಇಸ್ಲಾಮಾಬಾದ್‌ : ಕರ್ತಾರ್‌ಪುರ ಕಾರಿಡಾರ್‌ ತೆರೆಯುವ ಮೂಲಕ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಭಾರತಕ್ಕೆ ಗೂಗ್ಲಿ ಎಸೆದಿದ್ದಾರೆ ಎಂದು ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಹೇಳಿದ್ದಾರೆ.

Advertisement

ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ಥಾನ್‌ ತೆಹರೀಕ್‌ ಎ ಇನ್ಸಾಫ್ ಸರಕಾರ ನೂರು ದಿನಗಳನ್ನು ಪೂರೈಸಿರುವ ಪ್ರಯುಕ್ತ ಏರ್ಪಟ್ಟ ಸಮಾರಂಭದಲ್ಲಿ ಮಾತನಾಡುತ್ತಿದ್ದ ಕುರೇಶಿ ಅವರು ಭಾರತ-ಪಾಕ್‌ ದ್ವಿಪಕ್ಷೀಯ ಸಂಬಂಧಗಳು ಪುನರಾರಂಭಗೊಳ್ಳುವ ಅಗತ್ಯವನ್ನು ಒತ್ತಿ ಹೇಳುತ್ತಾ, ಭಾರತದೊಂದಿಗಿನ ಶಾಂತಿ ವಿಚಾರದಲ್ಲಿ ಪಾಕಿಸ್ಥಾನವು ಜನ ಕೇಂದ್ರಿತ ನಿಲುವು ಹೊಂದಿದೆ; ಭಾರತ ಒಂದು ಹೆಜ್ಜೆ ಮುಂದೆ ಇಟ್ಟರೆ ಪಾಕಿಸ್ಥಾನ ಎರಡು ಹೆಜ್ಜೆ ಮುಂದಿಡಲು ಬಯಸುತ್ತದೆ ಎಂದು ಹೇಳಿದರು.

ಎರಡು ದಿನಗಳ ಹಿಂದಷ್ಟೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌,  “ಭಾರತ ಮತ್ತು ಪಾಕಿಸ್ಥಾನ ಎರಡೂ ದೇಶಗಳು ಹಿಂದೆ ತಪ್ಪೆಸಗಿವೆ; ಹಾಗಿದ್ದರೂ ಅವು ಭೂತಕಾಲದಲ್ಲೇ ಉಳಿಯಕೂಡದು;’ ಎಂದು ಹೇಳಿದ್ದರು.

ನಿನ್ನೆಯಷ್ಟೇ ಇಮ್ರಾನ್‌ ಖಾನ್‌ “ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಲು ನಾನು ಉತ್ಸುಕನಾಗಿದ್ದೇನೆ; ನಮ್ಮ ನೆಲದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸಿ ನೆರೆಯ ದೇಶಕ್ಕೆ ಹಾನಿ ಉಂಟುಮಾಡುವುದಿಂದ ನಮಗೂ ಒಳಿತಾಗುವುದಿಲ್ಲ ಎಂಬುದನ್ನು ನಾವು ಅರಿತಿದ್ದೇವೆ’ ಎಂದು ಹೇಳಿದ್ದಾರೆ. 

ಭಾರತ ಮತ್ತು ಪಾಕಿಸ್ಥಾನದ ನಡುವೆ ಅಡ್ಡಗೋಡೆಯಾಗಿರುವುದು ಕಾಶ್ಮೀರ ವಿಷಯ ಮಾತ್ರ. ನಾವದನ್ನು ಬಗೆಹರಿಸಲು ಸಾಧ್ಯವಿಲ್ಲವೇ. ಮನುಷ್ಯನು ಚಂದ್ರನ ಮೇಲೆ ನಡೆದಿದ್ದಾನೆ; ಹಾಗಿರುವಾಗ ನಮಗೆ ಕಾಶ್ಮೀರ ಸಮಸ್ಯೆ ಬಗೆಹರಿಸುವುದು ಕಷ್ಟದ ವಿಷಯವೇನೂ ಅಲ್ಲ;  ಪರಸ್ಪರ  ಮಾತುಕತೆ ಮೂಲಕವೇ ನಾವು ಈ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ  ಎಂದು ಇಮ್ರಾನ್‌ ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next