Advertisement

ಯುದ್ಧ ಸಿದ್ಧತೆಯಲ್ಲಿ ಪಾಕ್‌?ಸಿಯಾಚಿನ್‌ನಲ್ಲಿ ವಾಯುಪಡೆ ವಿಮಾನ ಹಾರಾಟ!

01:58 PM May 24, 2017 | |

ಶ್ರೀನಗರ : ಭಾರತ-ಪಾಕಿಸ್ಥಾನ ಗಡಿಯಲ್ಲಿ ಯುದ್ಧ ಸದೃಶ ವಾತಾವರಣ ನಿರ್ಮಾಣವಾಗಿರುವ ವೇಳೆಯಲ್ಲೇ ಗುರುವಾರ ಬೆಳಗ್ಗೆ ಸಿಯಾಚಿನ್‌ ಗಡಿಯಲ್ಲಿ ಪಾಕ್‌ ವಾಯುಪಡೆಯ ವಿಮಾನವನ್ನು ಹಾರಾಟ ನಡೆಸಲಾಗಿದೆ. 

Advertisement

ಪಾಕ್‌ ವಾಯುಪಡೆಯ ಮುಖ್ಯಸ್ಥ  ಸೋಹೇಲ್‌ ಅಮಾನ್‌ ಸ್ಕ್ವಾರ್ದುವಿನಲ್ಲಿರುವ ಖಾದ್ರಿ ವಾಯುನೆಲೆಗೆ ಭೇಟಿ ನೀಡಿದ್ದು, ಭಾರತದ ಯಾವುದೇ ಆಕ್ರಮಣಕ್ಕೆ ಪ್ರತಿಯಾಗಿ  ತೀವ್ರ ದಾಳಿ ನಡೆಸಲು ಸಿದ್ದವಾಗಿರುವುದಾಗಿ ಮುನ್ಸೂಚನೆ ನೀಡಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ. 

ಸಿಯಾಚಿನ್‌ ಗಡಿಗೆ ಹೊಂದಿಕೊಂಡಿರುವಂತೆ  ಮಿರಾಜ್‌ ಯುದ್ಧ ವಿಮಾನವನ್ನು ಪಾಕ್‌ ವಾಯುಪಡೆ ಹಾರಾಟ ನಡೆಸಿದೆ. ದೆಹಲಿಯಿಂದ ವಾಯುಪಡೆಯ ಮೂಲಗಳು ತಿಳಿಸಿರುವಂತೆ ಪಾಕ್‌ನಿಂದ ಭಾರತದ ವಾಯುಪ್ರದೇಶದ ಯಾವುದೇ ಉಲ್ಲಂಘನೆ ಆಗಿಲ್ಲ. 

ನೌಶೇರಾ ಸೆಕ್ಟರ್‌ನ ಮುಂಚೂಣಿ ನೆಲೆಯಲ್ಲಿದ್ದ ಪಾಕ್‌ ಬಂಕರ್‌ಗಳನ್ನು  ಭಾರತೀಯ ಸೇನೆ ನಾಶಗೊಳಿಸಿದ ಬೆನ್ನಲ್ಲೇ ಪಾಕ್‌ ವಿಮಾನ ಹಾರಾಟ ನಡೆಸಿ ಯಾವುದೇ ದಾಳಿಗೆ ಸಿದ್ದವಾಗಿರುವ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next