Advertisement

ಇಮ್ರಾನ್‌ ಖಾನ್‌ ಅಶ್ಲೀಲ ಸಂದೇಶ: ರೋಸಿಹೋದ ಪಿಟಿಐ ಶಾಸಕಿ ರಾಜೀನಾಮೆ

11:12 AM Aug 02, 2017 | Team Udayavani |

ಇಸ್ಲಾಮಾಬಾದ್‌ : ಆಘಾತಕಾರಿ ಆರೋಪವೊಂದರಲ್ಲಿ ಇಮ್ರಾನ್‌ ಖಾನ್‌ ಅವರ ತೆಹರೀಕ್‌ ಎ ಇನ್ಸಾಫ್ (ಪಿಟಿಐ) ಪಕ್ಷಕ್ಕೆ ರಾಜೀನಾಮೆ ನೀಡಿರುವ  ಶಾಸಕಿ ಆಯೇಷಾ ಗುಲಾಲಾಯಿ, “ನನಗೆ ಇಮ್ರಾನ್‌ ಖಾನ್‌ ಅಶ್ಲೀಲ ಮೊಬೈಲ್‌ ಸಂದೇಶಗಳನ್ನು ಕಳುಹಿಸುತ್ತಿದ್ದರು’ ಎಂದು ದೂರಿದ್ದಾರೆ. 

Advertisement

ಆಯೇಷಾ ಗುಲಾಲಾಯಿ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, “ಇಮ್ರಾನ್‌ ಖಾನ್‌ ವಿರುದ್ಧ ನಾನು ಮಾಡಿರುವ ಈ ಆರೋಪದ ಬಗ್ಗೆ ತನಿಖೆಯಾಗಬೇಕು’ ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ. 

“ಇಮ್ರಾನ್‌ ಖಾನ್‌ ನನಗೆ ಕಳುಹಿಸಿರುವ ಅಶ್ಲೀಲ ಮೊಬೈಲ್‌ ಸಂದೇಶಗಳಿಂದ ಜುಗುಪ್ಸೆಗೊಂಡು ನಾನು ಅವರ ಪಕ್ಷದ ಶಾಸಕಿಯ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದ್ದೇನೆ’ ಎಂದು ಗುಲಾಲಾಯಿ ಹೇಳಿದ್ದಾರೆ. 

“ನನಗೆ ಪಾರ್ಟಿ ಟಿಕೆಟ್‌ ಬೇಕಾಗಿಲ್ಲ ಅಥವಾ ಎನ್‌ಎ-1 ಸೀಟ್‌ ಕೂಡ ಬೇಕಾಗಿಲ್ಲ. ಎನ್‌ಎ-1 ಸೀಟಿಗಾಗಿ ಕೂಡ ನಾನು ಪಕ್ಷವನ್ನು ತ್ಯಜಿಸುತ್ತಿಲ್ಲ. ಇಮ್ರಾನ್‌ ಖಾನ್‌ ಅವರ ಅಶ್ಲೀಲ ವರ್ತನೆಯಿಂದ ಬೇಸತ್ತು ನಾನು ಪಿಟಿಐ ಪಕ್ಷದ ಶಾಸಕಿಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆನೆ’ ಎಂದು ಗುಲಾಲಾಯಿ ಹೇಳಿದ್ದಾರೆ.

“ಇಮ್ರಾನ್‌ ಖಾನ್‌ ಅವರ ಹಲವು ದುರ್ಗುಣಗಳಲ್ಲಿ ಅಶ್ಲೀಲ ಮೊಬೈಲ್‌ ಸಂದೇಶ ಕಳಿಸುವುದು ಕೂಡ ಒಂದಾಗಿದೆ’ ಎಂದು ಗುಲಾಲಾಯಿ ಆರೋಪಿಸಿದ್ದಾರೆ. 

Advertisement

“2013ರ ಅಕ್ಟೋಬರ್‌ನಲ್ಲಿ ನಾನು ಇಮ್ರಾನ್‌ ಖಾನ್‌ ಅವರಿಂದ ಮೊದಲ ಮೊಬೈಲ್‌ ಸಂದೇಶ ಪಡೆದೆ. ಇಮ್ರಾನ್‌ ಅವರ ಬ್ಲ್ಯಾಕ್‌ ಬೆರಿ ಫೋನನ್ನು ಚೆಕ್‌ ಮಾಡಿದರೆ ನಿಮಗದು ಗೊತ್ತಾಗುತ್ತದೆ. ಪಿಟಿಐ ಅಧ್ಯಕ್ಷರಾಗಿರುವ ಇಮ್ರಾನ್‌ ಇತರ ಮಹಿಳೆಯರಿಗೂ ಬ್ಲ್ಯಾಕ್‌ಬೆರಿ ಉಪಯೋಗಿಸಿರೆಂದು ಒತ್ತಾಯಿಸುತ್ತಾರೆ; ಏಕೆಂದರೆ ಅದರಲ್ಲಿನ ಸಂದೇಶಗಳನ್ನು ಅಳಿಸಲು ಸಾಧ್ಯವಿಲ್ಲ; ನೀವು ಆತನ ಬ್ಲ್ಯಾಕ್‌ಬೆರಿ ಚೆಕ್‌ ಮಾಡಿ; ನಿಮಗೆ ಎಲ್ಲವೂ ಗೊತ್ತಾಗುತ್ತದೆ. ಆತನ ಸಂದೇಶಗಳಲ್ಲಿರುವ ಅಶ್ಲೀಲ ಪದಗಳನ್ನು ಯಾವುದೇ ಗೌರವಾನ್ವಿತ ವ್ಯಕ್ತಿಗಳು ಸಹಿಸಲಾರರು; ಇಮ್ರಾನ್‌ ಖಾನ್‌ ಗೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದು ಗೊತ್ತಿಲ್ಲ’ ಎಂದು ಗುಲಾಲಾಯಿ ಆರೋಪಿಸಿದ್ದಾರೆ. 

ಗುಲಾಲಾಯಿ ಅವರು ಮಹಿಳಾ ಮೀಸಲು ಸೀಟ್‌ ಮೂಲಕ ಎಂಎನ್‌ಎ ಗೆದ್ದವರು. ಆಕೆ ಪಿಟಿಐ ಪಕ್ಷದ ಸಕ್ರಿಯ ಸದಸ್ಯೆ. 

Advertisement

Udayavani is now on Telegram. Click here to join our channel and stay updated with the latest news.

Next