ಇಸ್ಲಾಮಾಬಾದ್: ಶ್ರೀಲಂಕಾದ ಮಾದರಿಯಲ್ಲೇ ಆರ್ಥಿಕವಾಗಿ ತೀವ್ರ ಕುಸಿತ ಕಾಣುತ್ತಿರುವ ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ವಿದೇಶಿ ವಿನಿಮಯ ಮೀಸಲು ಅತ್ಯಂತ ಕೆಳಮಟ್ಟಕ್ಕಿಳಿದಿದೆ.
ಕಳೆದ ವಾರಕ್ಕೆ ಹೋಲಿಸಿದರೆ ದೇಶದ ವಿದೇಶಿ ವಿನಿಮಯ ಮೀಸಲು ಶೇ.1.1ರಷ್ಟು ಅಂದರೆ 178 ದಶಲಕ್ಷ ಡಾಲರ್‌ನಷ್ಟು ಕುಸಿದಿದ್ದು, ಈ ಮಟ್ಟದ ಕುಸಿತ ಕಂಡಿರುವುದು 2019ರ ಡಿಸೆಂಬರ್ ಬಳಿಕ ಇದೇ ಮೊದಲು ಎಂದು ಪಾಕ್ ಕೇಂದ್ರ ಬ್ಯಾಂಕ್ ಹೇಳಿದೆ.
ಮೇ 6ಕ್ಕೆ ಅಂತ್ಯಗೊಂಡ ವಾರದಲ್ಲಿ ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಮೊತ್ತ 16.4 ಶತಕೋಟಿ ಡಾಲರ್ ಆಗಿದ್ದು, ಅದಕ್ಕಿಂತಲೂ ಹಿಂದಿನ ವಾರ ಇದು 16.5 ಶತಕೋಟಿ ಡಾಲರ್ ಆಗಿತ್ತು.
ಇದನ್ನೂ ಓದಿ:ಆ್ಯಸಿಡ್ ದಾಳಿಗೊಳಗಾದವರಿಗೆ ನಿವೇಶನ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಆದೇಶ
ಚಾಲ್ತಿ ಖಾತೆ ಮತ್ತು ವ್ಯಾಪಾರ ಕೊರತೆ, ಬಾಹ್ಯ ಸಾಲ ಪಾವತಿ ಹೆಚ್ಚಳ, ಡಾಲರ್ ಒಳಹರಿವು ಕುಸಿತವೇ ವಿದೇಶಿ ವಿನಿಮಯ ಮೀಸಲು ಕುಸಿಯಲು ಕಾರಣ ಎಂದು ಹೇಳಲಾಗಿದೆ.