Advertisement

ಪಾಕ್ ನಲ್ಲಿ ಕೋವಿಡ್ 19 ವೈರಸ್ ಹೆಚ್ಚಳದ ನಡುವೆಯೇ ಲಾಕ್ ಡೌನ್ ಸಡಿಲಿಕೆ

08:31 AM May 12, 2020 | Nagendra Trasi |

ಇಸ್ಲಾಮಾಬಾದ್: ಕೋವಿಡ್ 19 ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಪಾಕಿಸ್ತಾನ ಒಂದು ತಿಂಗಳ ಕಾಲಾವಧಿ ಜಾರಿಯಲ್ಲಿದ್ದ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡುತ್ತಿರುವುದಾಗಿ ವರದಿ ತಿಳಿಸಿದೆ. ಪಾಕಿಸ್ತಾನದಲ್ಲಿ ಈವರೆಗೆ 24,474 ಕೋವಿಡ್ 19ವೈರಸ್ ಪ್ರಕರಣ ಪತ್ತೆಯಾಗಿತ್ತು,

Advertisement

ಪಾಕಿಸ್ತಾನದಲ್ಲಿ ಒಂದೇ ದಿನ 1,637 ಪ್ರಕರಣಗಳು ಪತ್ತೆಯಾಗಿದ್ದು, 24 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ದೇಶದಲ್ಲಿ ಹಂತ, ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುವುದು ಎಂದು ಪ್ರಧಾನಿ ಇಮ್ರಾನ್ ಖಾನ್ ತಿಳಿಸಿರುವುದಾಗಿ ವರದಿ ಹೇಳಿದೆ.

ಶನಿವಾರದಿಂದ ಪಾಕಿಸ್ತಾನದಲ್ಲಿ ವಿವಿಧ ವ್ಯಾಪಾರ, ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ. ದೀರ್ಘ ಲಾಕ್ ಡೌನ್ ನಿಂದ ದೇಶದ ಆರ್ಥಿಕ ಚಟುವಟಿಕೆಗೆ ಹೊಡೆತ ಬಿದ್ದಿರುವುದಾಗಿ ವರದಿ ತಿಳಿಸಿದೆ.

ಅಂಗಡಿ ಹಾಗೂ ಕೆಲವು ಆಯ್ದ ವ್ಯಾಪಾರಕ್ಕೆ ವಾರದಲ್ಲಿ ನಾಲ್ಕು ದಿನ ಅವಕಾಶ ನೀಡಲಾಗಿದ್ದು, ಸಂಜೆ 4ಗಂಟೆಗೆ ವ್ಯಾಪಾರ ಬಂದ್ ಮಾಡಬೇಕು ಎಂದು ಖೈಬರ್ ಪಖ್ತುನ್ ಖಾವಾ ಸರ್ಕಾರ ವಿವರಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸರ್ಕಾರದ ಸೂಚನೆ ಪಾಲಿಸುವುದಾಗಿ ಮೌಲ್ವಿಗಳು ಒಪ್ಪಿಕೊಂಡ ಹಿನ್ನೆಲೆಯಲ್ಲಿ ರಂಝಾನ್ ತಿಂಗಳ ನೆಲೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next