Advertisement

ಗಡಿಯಲ್ಲಿ Pak ನಿಂದ ಶಸ್ತ್ರಾಸ್ತ್ರ ಶೇಖರಣೆ; ಜಮ್ಮು-ಕಾಶ್ಮೀರದ ಮೇಲೆ ಪುಲ್ವಾಮಾ ಮಾದರಿ ದಾಳಿ?

10:57 AM Sep 07, 2019 | Team Udayavani |

ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಾರತವನ್ನು ಪ್ರಚೋದನೆಗೊಳಸಪಡಿಸುವ ನಿಟ್ಟಿನಲ್ಲಿ ಯುದ್ಧೋತ್ಸಾಹದಲ್ಲಿರುವ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಪ್ರಮಾಣದಲ್ಲಿ ಸೇನೆ ಹಾಗೂ ಉಗ್ರರನ್ನು ನಿಯೋಜಿಸಿದೆ. ಅಷ್ಟೇ ಅಲ್ಲ ಪುಲ್ವಾಮಾ ಮಾದರಿ ಭಯೋತ್ಪಾದನಾ ದಾಳಿ ನಡೆಸಲು ಪಾಕಿಸ್ತಾನ ಸಂಚು ನಡೆಸಿದೆ ಎಂದು ವರದಿ ತಿಳಿಸಿದೆ.

Advertisement

ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಸ್ಥಳೀಯರ ನೆರವಿನೊಂದಿಗೆ ಪಾಕಿಸ್ತಾನ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಶೇಖರಿಸಿಟ್ಟಿದೆ ಎಂದು ವರದಿ ವಿವರಿಸಿದೆ. ಗಡಿ ನಿಯಂತ್ರಣ ರೇಖೆ ಬಳಿ ಜಮ್ಮು-ಕಾಶ್ಮೀರದೊಳಕ್ಕೆ ನುಗ್ಗಲು ಕಾಯುತ್ತಿರುವ ಉಗ್ರರಿಗೆ ಈ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲು ಶೇಖರಿಸಿಡಲಾಗಿದೆ ಎಂದು ಮೂಲಗಳು ಹೇಳಿದೆ.

ಜೀ ನ್ಯೂಸ್ ವರದಿ ಪ್ರಕಾರ, ಸೆಪ್ಟೆಂಬರ್ 1 ಮತ್ತು 2ರ ರಾತ್ರಿ ಗಡಿನಿಯಂತ್ರಣ ರೇಖೆ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗಿತ್ತು. ಈ ಶಸ್ತ್ರಾಸ್ತ್ರಗಳನ್ನು ಪಾಕ್ ನ 10 ಬಲೂಚ್ ರೆಜಿಮೆಂಟ್  ಪಾಕ್ ಆಕ್ರಮಿತ ಕಾಶ್ಮೀರದ ರಾವಲ್ ಕೋಟ್ ನ ರಾಖಾ ಚಕ್ರಿ ಸೆಕ್ಟರ್ ನಲ್ಲಿ ಅಡಗಿಸಿ ಇಟ್ಟಿರುವುದಾಗಿ ವರದಿ ವಿವರಿಸಿದೆ.

ಸುಮಾರು 60ಕ್ಕೂ ಅಧಿಕ ಉಗ್ರರು ಉತ್ತರ ಕಾಶ್ಮೀರ ಭಾಗದಲ್ಲಿ ನುಸುಳಲು ಸಿದ್ದತೆ ಮಾಡಿಕೊಂಡಿದ್ದು, ದುಡಗಾಯ್, ಡುರ್ಮಾಟ್, ಲೋಸಾರ್, ಟೌಬಾಟ್ ಮತ್ತು ಸೋನಾರ್ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಉಗ್ರರ ದಂಡು ಬೀಡು ಬಿಟ್ಟಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next