Advertisement

ಪಂಜಾಬ್ ನಲ್ಲಿ ಡ್ರೋಣ್ ಶಸ್ತ್ರಾಸ್ತ್ರ ಇಳಿಕೆ ಪ್ರಕರಣದಲ್ಲಿ ಪಾಕ್ ಸರಕಾರದ ನೇರ ಪಾತ್ರ

10:38 AM Oct 11, 2019 | Hari Prasad |

ನವದೆಹಲಿ: ಸೆಪ್ಟಂಬರ್ ತಿಂಗಳಿನಲ್ಲಿ ಪಂಜಾಬ್ ನಲ್ಲಿ ಡ್ರೋಣ್ ಶಸ್ತ್ರಾಸ್ತ್ರ ಇಳಿಕೆ ಪ್ರಕರಣದಲ್ಲಿ ಪಾಕಿಸ್ಥಾನ ಸರಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳ ನೇರ ಪಾತ್ರ ಇದೆ ಎಂಬುದನ್ನು ಇಂಟೆಲಿಜೆನ್ಸ್ ಏಜೆನ್ಸಿಗಳು ಬಹಿರಂಗಪಡಿಸಿವೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ವರದಿಯೊಂದನ್ನು ಸಲ್ಲಿಸಲಾಗಿದೆ.

Advertisement

ಡ್ರೋಣ್ ಮೂಲಕ ಅಪಾರ ಪ್ರಮಾಣದ ಎ.ಕೆ.47 ರೈಫಲ್ ಗಳು ಮತ್ತು ಗ್ರೆನೇಡ್ ಗಳನ್ನು ಪಂಜಾಬ್ ನ ಅಮೃತ್ ಸರದಲ್ಲಿ ಇಳಿಸಿರುವ ಕೃತ್ಯದ ಹಿಂದೆ ಪಾಕ್ ಸರಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳ ನೇರ ಕೈವಾಡ ಇರುವುದು ಖಚಿತ ಮೂಲಗಳಿಂದ ಸಾಬೀತಾಗಿದೆ ಎಂದು ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಸ್ತ್ರಾಸ್ತ್ರ ಇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಕನಿಷ್ಠ ಎಂಟು ಶಸ್ತ್ರಾಸ್ತ್ರ ಪ್ರಕರಣಗಳನ್ನು ಪತ್ತ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಹಾಗೂ ಇನ್ನೂ ಕೆಲವು ಪತ್ತೆಯಾಗದ ಶಸ್ತ್ರಾಸ್ತ್ರ ಇಳಿಕೆ ಪ್ರಕರಣಗಳ ಇರುವಿಕೆಯನ್ನು ಈ ವರದಿ ಅಲ್ಲಗಳೆದಿಲ್ಲ. ಕಾಶ್ಮೀರ ಭಾಗದಲ್ಲಿ ಅಶಾಂತಿ ಸೃಷ್ಟಿಸಲು ಉಗ್ರರಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಈ ಶಸ್ತ್ರಾಸ್ತ್ರಗಳನ್ನು ಡ್ರೋಣ್ ಮೂಲಕ ಪಾಕಿಸ್ಥಾನ ಕಡೆಯಿಂದ ಇಳಿಸಿರಬಹುದೆಂಬ ಬಲವಾದ ಶಂಕೆಯನ್ನೂ ಸಹ ಇಂಟೆಲಿಜೆನ್ಸ್ ಏಜೆನ್ಸಿ ಸಲ್ಲಿಸಿರುವ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ಪೋಟಕಗಳು, ಶಸ್ತ್ರಾಸ್ತ್ರಗಳು ಅಥವಾ ಸಂವಹನ ಉಪಕರಣಗಳನ್ನು ಒಳಗೊಂಡಿರಬಹುದಾಗಿದ್ದ ತಲಾ 10 ಕಿಲೋ ಗ್ರಾಂ ತೂಕದ ವಸ್ತುಗಳನ್ನು ಪಾಕಿಸ್ಥಾನದಿಂದ ಭಾರತದ ನೆಲದೊಳಕ್ಕೆ ಅಕ್ರಮವಾಗಿ ಇಳಿಸಿರುವುದು ಈ ವರದಿಯಲ್ಲಿ ಬಹಿರಂಗಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಗಡಿ ಭದ್ರತಾ ಪಡೆಗಳ ವೈಫಲ್ಯದ ಕುರಿತಾಗಿಯೂ ಈ ವರದಿ ಹಲವು ಪ್ರಶ್ನೆಗಳನ್ನು ಎತ್ತಿದೆ. ಚೀನಾ ನಿರ್ಮಿತ ಈ ಡ್ರೋನ್ ಗಳು ಭಾರತದ ನೆಲದೊಳಕ್ಕೆ ಹಾರಿ ಬಂದಿರುವುದನ್ನು ಪತ್ತೆಹಚ್ಚಲು ಬಿ.ಎಸ್.ಎಫ್. ವಿಫಲವಾದ ಕುರಿತಾಗಿಯೂ ಈ ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಭಾರತ ಪಾಕಿಸ್ಥಾನ ಗಡಿ ಭಾಗದಲ್ಲಿ ಶಸ್ತ್ರಾಸ್ತ್ರ ಇಳಿಸಲು ಬಳಕೆಯಾಗಿದ್ದ ಎರಡು ಡ್ರೋಣ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾಗಿ ಪಂಜಾಬ್ ಸರಕಾರ ಹೇಳಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next