ನವದೆಹಲಿ: ಟಿ-20 ವಿಶ್ವಕಪ್ ಗೆ ದಿನಗಣನೆ ಆರಂಭವಾಗಿದೆ. ಮುಂದಿನ ತಿಂಗಳು ( ಅ.16 ರಿಂದ) ಆಸ್ಟ್ರೇಲಿಯಾದಲ್ಲಿ ಟಿ-20 ಕದನ ಆರಂಭವಾಗಲಿದೆ. ಪಾಕಿಸ್ತಾನದ ಮಾಜಿ ಕ್ರಿಕಿಟಿಗ ಶಾಹಿದ್ ಆಫ್ರಿದಿ ಭಾರತದ ಆಟಗಾರನೊಬ್ಬನನ್ನು ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಟಿ-20 ಟ್ರೋಫಿ ಗೆಲ್ಲುವ ಮೆಚ್ಚಿನ ತಂಡಗಳಲ್ಲಿ ಟೀಮ್ ಇಂಡಿಯಾ ಕೂಡ ಒಂದು. ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಭಾರತ ಭರ್ಜರಿಯಾಗಿ ಟಿ-20 ವಿಶ್ವಕಪ್ ಗೆ ತಯಾರಿ ನಡೆಸಿದೆ.
ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಇತ್ತೀಚಿನ ದಿನದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಆಫ್ರಿದಿ ಹಾರ್ದಿಕ್ ಪಾಂಡ್ಯ ಅವರನ್ನು ಹೊಗಳಿದ್ದಾರೆ.
ಖಾಸಗಿ ಟಿವಿ ವಾಹಿನಿಯಲ್ಲಿ ಮಾತಾನಾಡಿ ಅವರು, ಹಾರ್ದಿಕ್ ಪಾಂಡ್ಯರಂತಹ ಆಲ್ ರೌಂಡರ್ ಆಟಗಾರ ನಮ್ಮಲ್ಲಿಲ್ಲ. ಪಾಂಡ್ಯರಂತಹ ಫಿನಿಶರ್ ಆಟಗಾರರು ಪಾಕ್ ನಲ್ಲಿಲ್ಲ. ನಮ್ಮಲ್ಲಿ ಫಿನಿಷರ್ ಆಗಿ ಆಸಿಫ್ ಆಲಿ, ಖುಷ್ ದಿಲ್, ನವಾಜ್ ಆಗಿ ಮಿಂಚುತ್ತಾರೆ ಅಂದುಕೊಂಡಿದ್ದೀವಿ ಆದರೆ ಅವರಿಂದ ಅದು ಸಾಧ್ಯವಾಗಿಲ್ಲ. ಶಾದಾಬ್ ಬೌಲಿಂಗ್ ಮಾಡುತ್ತಾರೆ. ಅವರು ಉತ್ತಮ ರೀತಿ ಬೌಲ್ ಮಾಡಿದರೆ ಪಾಕಿಸ್ತಾನ ಗೆಲ್ಲುತ್ತದೆ. ಈ ನಾಲ್ವರು ಆಟಗಾರರಲ್ಲಿ ಕನಿಷ್ಠ ಇಬ್ಬರಾದರೂ ಉತ್ತಮ ಪ್ರದರ್ಶನ ನೀಡಬೇಕೆಂದಿದ್ದಾರೆ.
ಇದರೊಂದಿಗೆ ಪಾಕಿಸ್ತಾನ ಟಿ-20 ವಿಶ್ವಕಪ್ ಗೆಲ್ಲಬೇಕಾದರೆ ಬೌಲಿಂಗ್ , ಬ್ಯಾಟಿಂಗ್ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕೆಂದಿದ್ದಾರೆ.