Advertisement

ಮೋದಿ ವಿಮಾನಕ್ಕೆ ವಾಯುಪ್ರದೇಶ ಬಳಕೆಗೆ ನಕಾರ; ಪಾಕ್ ವಿರುದ್ಧ ಐಸಿಎಒ ಮೆಟ್ಟಿಲೇರಲಿದೆ ಭಾರತ

09:47 AM Oct 29, 2019 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ವಾಯುಮಾರ್ಗವನ್ನು ಬಳಸಲು ಅನುಮತಿಯನ್ನು ಮತ್ತೆ ನಿರಾಕರಿಸಿದ ಪಾಕಿಸ್ತಾನದ ಕ್ರಮವನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಸ್ಥೆ(ಐಸಿಎಒ)ಯಲ್ಲಿ ಪ್ರಶ್ನಿಸಲು ಭಾರತದ ಮುಮದಾಗಿದೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ.

Advertisement

ವಿವಿಐಪಿಗಳ ವಿಶೇಷ ವಿಮಾನಗಳಿಗೆ ಯಾವುದೇ ದೇಶವಾಗಲಿ ತನ್ನ ವಾಯುಮಾರ್ಗ ಬಳಸಲು ಅನುಮತಿ ನೀಡುತ್ತದೆ. ಆದರೆ ಪಾಕಿಸ್ತಾನ ವಿರುದ್ಧ ನಿಲುವನ್ನು ತಾಳಿದ್ದು ದುರದೃಷ್ಟಕರ ಎಂದು ವರದಿ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾಕ್ಕೆ ತೆರಳುವ ನಿಟ್ಟಿನಲ್ಲಿ ಪಾಕಿಸ್ತಾನದ ವಾಯುಮಾರ್ಗ ಬಳಕೆಗೆ ಅವಕಾಶ ನೀಡಬೇಕೆಂದು ಕೇಂದ್ರ ಸರಕಾರ ಮನವಿ ಮಾಡಿಕೊಂಡಿತ್ತು. ಆದರೆ ಪಾಕಿಸ್ತಾನ ಮೋದಿ ಅವರ ವಿಮಾನ ಹಾರಾಟಕ್ಕೆ ಅವಕಾಶ ನಿರಾಕರಿಸಿತ್ತು.

ವಿವಿಐಪಿಗಳ ವಿಮಾನ ಸಂಚಾರಕ್ಕೆ ಇತರ ದೇಶಗಳ ವಾಯುಮಾರ್ಗ ಬಳಕೆಗೆ ಐಸಿಎಒ(ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ) ನಿಯಾಮವಳಿ ಇದೆ. ಅದರಂತೆಯೇ ನಾವು ಅನುಮತಿ ಕೋರಿದ್ದೇವು. ಭಾರತ ಇನ್ನು ಮುಂದೆಯೂ ಐಸಿಎಒ ನಿಯಮಾವಳಿ ಪ್ರಕಾರವೇ ಅನುಮತಿ ಕೋರಲಿದೆ. ಏತನ್ಮಧ್ಯೆ ಪ್ರಧಾನಿ ಮೋದಿ ಅವರ ವಿಮಾನಕ್ಕೆ ವಾಯುಮಾರ್ಗ ಬಳಸಲು ಅನುಮತಿ ನಿರಾಕರಿಸಿದ ಪಾಕಿಸ್ತಾನದ ವಿರುದ್ಧ ಎಸಿಎಒಗೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next