Advertisement

ವ್ಯಾಲೆಂಟೈನ್ಸ್ ಡೇಗೆ ನಿಷೇಧ; ಪಾಕಿಸ್ತಾನ ಹೈಕೋರ್ಟ್ ಆದೇಶ

05:45 PM Feb 13, 2017 | Team Udayavani |

ಇಸ್ಲಾಮಾಬಾದ್:ದೇಶಾದ್ಯಂತ ಫೆಬ್ರುವರಿ 14ರಂದು ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನಾಚರಣೆ) ಆಚರಿಸಬಾರದು ಎಂದು ಪಾಕಿಸ್ತಾನದ ಹೈಕೋರ್ಟ್ ಸೋಮವಾರ ನಿಷೇಧ ಹೇರಿದೆ.

Advertisement

ಪ್ರೇಮಿಗಳ ದಿನಾಚರಣೆ ಇಸ್ಲಾಂ ವಿರೋಧಿ ಎಂದು ಆರೋಪಿಸಿ ಅಬ್ದುಲ್ ವಾಹೀದ್ ಎಂಬವರು ಇಸ್ಲಾಮಾಬಾದ್ ಹೈಕೋರ್ಟ್ ಗೆ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿ, ಈ ಆದೇಶ ನೀಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ವ್ಯಾಲೆಂಟೈನ್ಸ್ ಡೇ ಇಸ್ಲಾಂ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿರುವ ದೂರುದಾರ, ಪ್ರೇಮಿಗಳ ದಿನಾಚರಣೆಯನ್ನು ನಿಷೇಧಿಸಬೇಕೆಂದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿ ಅಭಿಯಾನ ನಡೆಸಿರುವುದಾಗಿ ವರದಿ ವಿವರಿಸಿದೆ.

ಈ ಹಿನ್ನೆಲೆಯಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಕೂಡಾ ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದ ಸುದ್ದಿ ಪ್ರಸಾರವನ್ನು ನಿಲ್ಲಿಸಬೇಕೆಂದು ಪಾಕ್ ಸರ್ಕಾರ ಸೂಚನೆ ನೀಡಿದೆ ಎಂದು ವರದಿ ಹೇಳಿದೆ. ಅಲ್ಲದೇ ಕೋರ್ಟ್ ಆದೇಶವನ್ನು ಮಾಧ್ಯಮಗಳು ಅನುಸರಿಸಲಿವೆ ಎಂದು ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಕೂಡಾ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next